ಸಮಾಜಕ್ಕೆ ವಿಶ್ವನಾಥ ಸಾಹೇಬರು ತಮ್ಮದೇ ಆದ ರೀತಿಯಲ್ಲಿ ಬಹುದೊಡ್ಡ ಕೊಡುಗೆಗಳನ್ನು ಕೊಟ್ಟಿದ್ದಾರೆ, ಇಡೀ ಕುರುಬ ಸಮಾಜವನ್ನು ಕರ್ನಾಟಕದ ಉದ್ದಗಲಕ್ಕೂ ಧ್ರುವಿಕರಿಸುವ ನಿಟ್ಟಿನಲ್ಲಿ ಅತಿ ದೊಡ್ಡ ಶ್ರಮವನ್ನುವಹಿಸಿದ್ದರು.
ಕನಕ ಗುರುಪೀಠ ಸ್ಥಾಪನೆಯಿಂದ ಕುರುಬ ಸಮಾಜಕ್ಕೆ ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ರಾಜಕೀಯವಾಗಿ ಒಂದು ಹೊಸ ಚೈತನ್ಯವನ್ನು ತಂದು ಕೊಡುವುದರಲ್ಲಿ ಅತಿ ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡಿದ್ದರು, ಇದರಿಂದ ಇಡಿ ಹಿಂದುಳಿದ ವರ್ಗಗಳಿಗೆ ಒಂದು ಹೊಸ ಸಾಮಾಜಿಕ ಹಾದಿ ತೆರೆಯಲು ಕಾರಣಕರ್ತರಾದರು.
ಇಂದಿಗೂ ಎಲ್ಲ ರೀತಿಯಲ್ಲೂ ದೇವರಾಜ್ ಅರಸ್ ರವರ ಪ್ರತಿಬಿಂಬದಂತೆ ವಿಶ್ವನಾಥ್ ಸಾಹೇಬರು ಕಾರ್ಯನಿರ್ವಹಣೆಯನ್ನು ಮಾಡುತ್ತಿದ್ದಾರೆ.
ರಾಜ್ಯದಲಾದ ಕೆಲವು ರಾಜಕೀಯ ಘಟನಾವಳಿಗಳು ಮತ್ತು ಸಮಾಜದವರೆ ಆದ ಮಾನ್ಯ ಸಿದ್ದರಾಮಯ್ಯ ಸಾಹೇಬರು 5 ವರ್ಷ ಮುಖ್ಯಮಂತ್ರಿ ಅವಧಿಯನ್ನು ಪೂರೈಸಿದ ಮೇಲು ಕೂಡ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಮಾಜದ ಪರಿಸ್ಥಿತಿ ನಿರೀಕ್ಷಿತ ಬದಲಾವಣೆ ಎನ್ನೇನು ಕಂಡಿಲ್ಲ. ಕರ್ನಾಟಕ ರಾಜ್ಯದಲ್ಲಿ ಲಿಂಗಾಯಿತ ಸಮಾಜ ನಂತರ ಏಕಮೇವ ಅತಿದೊಡ್ಡ ಸಮಾಜ ಕುರುಬ ಸಮಾಜವಾಗಿದೆ ಆದರೂ ಕೂಡ ನಿರೀಕ್ಷಿತ ರಾಜಕೀಯ ಪ್ರಾತಿನಿಧ್ಯ ಹೊಂದುವುದರಲ್ಲಿ ನಾವು ವಿಫಲರಾಗಿದ್ದೇವೆ, ಮುಖ್ಯವಾದ ಕಾರಣ ಅತಿ ಕಡಿಮೆ ಸಂಖ್ಯೆಯಲ್ಲಿ ಸಮಾಜ ಶಾಸಕರನ್ನು ಹೊಂದಿರುವುದು, ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಾವು ಶಾಸಕರುಗಳನ್ನು ಹೊಂದಿಲ್ಲ ಜನತಂತ್ರ ರಾಜಕಾರಣದಲ್ಲಿ ಸಂಖ್ಯಾಬಲಗಳ ಆಧಾರದ ಮೇಲೆ ಯಾವುದೇ ಅಧಿಕಾರವನ್ನು ಹೊಂದಲು ಸಾಧ್ಯ, ಈ ಸಂಗತಿಯಲ್ಲಿ ಸಮಾಜ ಭಾರಿ ಹಿನ್ನಡೆಯನ್ನು ಅನುಭವಿಸಿದೆ.
ರಾಜ್ಯದಲ್ಲಿ 25 ರಿಂದ 30 ಶಾಸಕರನ್ನ ಹೊಂದುತ್ತಿದ್ದ ಸಮಾಜ ಇಂದು ಕೇವಲ 12 ಸಂಖ್ಯೆಗೆ ಬಂದುನಿಂತಿದೆ.
50 ಕ್ಷೇತ್ರಗಳಿಗೂ ಹೆಚ್ಚು ಸ್ಥಾನವನ್ನು ಗೆಲ್ಲುವ ಶಕ್ತಿಯನ್ನು ಹೊಂದಿದ್ದರೂ ಕೂಡ, ಸಂಘಟಿತ ಕಾರ್ಯತಂತ್ರದ ಕೊರತೆಯಿಂದಾಗಿ ನಮ್ಮ ಗುರಿಯನ್ನು ನಾವು ತಲುಪಲು ಸಾಧ್ಯವಾಗುತ್ತಿಲ್ಲ.
ಸಮಾಜದ ಬಂಧುಗಳು ಒಂದು ಅಘೋಷಿತ ಸಂಕಲ್ಪವನ್ನು ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವೆಲ್ಲರೂ ಕೂಡ ಇದ್ದೇವೆ, ನಮ್ಮ ಸಮಾಜದ ಯಾವುದೇ ವ್ಯಕ್ತಿ, ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಿದರು ಸಂಪೂರ್ಣವಾದ ಬೆಂಬಲವನ್ನು ನೀಡುವ ಮಾನಸಿಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು.
ಈಗ ಎದುರಾಗಿರುವ ಹುಣಸೂರು ಉಪಚುನಾವಣೆಯಲ್ಲಿ ವಿಶ್ವನಾಥ್ ಸಾಹೇಬರು ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ, ಈ ಕ್ಷೇತ್ರದ ಸಮಾಜದ ಬಂಧುಗಳು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಮಾನ್ಯ ವಿಶ್ವನಾಥ್ ಸಾಹೇಬರನ್ನು ಸಂಪೂರ್ಣವಾಗಿ ಬೆಂಬಲಿಸಬೇಕು ಆ ಮುಖೇನವಾಗಿ ಅವರು ಗೆಲ್ಲುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಕುರುಬ ಸಮಾಜದ ಶಾಸಕರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ನಾವು ರಾಜಕೀಯ ಪ್ರಾತಿನಿಧ್ಯವನ್ನು ದಿನೇದಿನೇ ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದೇವೆ. ರಾಜಕೀಯ ಶಕ್ತಿ ನಿರ್ಧಾರವಾಗುವುದು ನಮ್ಮ ಸಮಾಜದ ಶಾಸಕರ ಸಂಖ್ಯಾಬಲದ ಮೇಲೆ ಹೊರತು ನಾವು ರಾಜ್ಯದಲ್ಲಿ ಹೊಂದಿರುವ ಜನಸಂಖ್ಯೆಯಿಂದಲ್ಲ, ನಾವು ಹೊಂದುವ ಶಾಸಕರ ಸಂಖ್ಯೆಯಿಂದ ರಾಜಕೀಯ ಅಧಿಕಾರ ಮತ್ತು ಸಾಮಾಜಿಕ ಪ್ರಾಧಿನಿದ್ಯವನ್ನು ಹೊಂದಲು ಸಾಧ್ಯ.
ಕುಲಭಾಂದವರೇ ಇಂದು ಅಂಥ ಒಂದು ಸಂದರ್ಭ ನಮ್ಮ ಎದುರಿಗೆ ಹುಣಸೂರು ಉಪ ಚುನಾವಣೆಯ ರೂಪದಲ್ಲಿ ಬಂದಿದೆ ನಾವೆಲ್ಲರೂ ಸಂಘಟಿತರಾಗಿ, ನಮ್ಮ ಸಮಾಜದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸೋಣ.
ಮೈಸೂರು ಜಿಲ್ಲೆಯಲ್ಲಿ ಕುರುಬ ಸಮಾಜದ ಪರಿಸ್ಥಿತಿ ಏನಾಗಿದೆ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ, ನಮ್ಮ ಆತ್ಮಗೌರವ ಕಳೆದುಕೊಳ್ಳುವ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ, ಕನಿಷ್ಠ ಐದು ಶಾಸಕರನ್ನು ಮೈಸೂರು ಜಿಲ್ಲೆ ಒಂದರಲ್ಲೇ ಗೆಲ್ಲಿಸಿಕೊಳ್ಳುವ ಅವಕಾಶ ಇದ್ದರೂ ಕೂಡ , ಕೇವಲ ಇಬ್ಬರು ಶಾಸಕರನ್ನು ಮಾತ್ರ ನಾವು ಗೆಲ್ಲಿಸಿಕೊಳ್ಳುವಲ್ಲಿ ಸಫಲರಾದವು, ಪ್ರಸ್ತುತವಾಗಿ ಕುರುಬ ಸಮಾಜ ರಾಜಕೀಯ ಬಿಕ್ಕಟ್ಟನ್ನು ಎಲ್ಲಾ ಸ್ತರಗಳಲ್ಲೂ ಎದುರಿಸುತ್ತಿದೆ, ಇತ್ತೀಚೆಗೆ ಮೈಸೂರು ನಗರದಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹಿಂದಿನಿಂದಲೂ ಕೂಡ ಕನಿಷ್ಠ ಎಂಟರಿಂದ ಹನ್ನೆರಡು ನಗರಪಾಲಿಕೆ ಸದಸ್ಯರು ಸಮಾಜದಿಂದ ಆರಿಸಿ ಬರುತ್ತಿದ್ದರು, ಆದರೆ ಈ ಬಾರಿ ಆ ಸಂಖ್ಯೆ 3 ರಿಂದ 4 ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಸಮಾಜದ ಗೌರವ ಹೆಚ್ಚಬೇಕಾದರೆ ಹುಣಸೂರು ಉಪಚುನಾವಣೆಯಲ್ಲಿ ನಮ್ಮ ಸಮಾಜಕ್ಕೆ ಸೇರಿದ ಅಭ್ಯರ್ಥಿಯಾದ ಎಚ್.ವಿಶ್ವನಾಥ್ ಅವರನ್ನು ಗೆಲ್ಲಿಸಲೇಬೇಕಿದೆ, ಆ ಮೂಲಕ ಸಮಾಜದ ಶಕ್ತಿಯನ್ನು ತೋರಿಸುವ ಕೆಲಸವಾಗಬೇಕು
ಎಂಬತ್ತರ ದಶಕದಲ್ಲಿ ಕನಿಷ್ಠ ಐದು ಜನ ಸಂಸದರನ್ನು ಹೊಂದಿದ್ದವು ಆದರೆ ಇಂದು ಒಂದೇ ಒಂದು ಸಂಸದ ಸ್ಥಾನವನ್ನು ಹೊಂದುವುದರಲ್ಲಿ ಸೋತಿದ್ದೇವೆ, ಶೇಕಡ ಐದಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮಾಜ 12 ಜನ ಶಾಸಕರು ಮತ್ತು ಮೂರು ಜನ ಸಂಸದರನ್ನು ಹೊಂದಿದ್ದಾರೆ.
ಎಲ್ಲಾ ಸಂಗತಿಗಳನ್ನು ಅರಿತು ಮುಂಬರುವ ಹುಣಸೂರು ಉಪಚುನಾವಣೆಯಲ್ಲಿ ಸಮಾಜದ ಅಭ್ಯರ್ಥಿಯಾದ ಎಚ್. ವಿಶ್ವನಾಥ್ ಅವರ ಗೆಲುವಿಗೆ ಕಾಯಾ-ವಾಚಾ-ಮನಸಾ ಶ್ರಮವಹಿಸಿ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ.
ಮಂಜುನಾಥ ಎಂ.ಕೆ
ಸಂಸ್ಥಾಪಕ ಅಧ್ಯಕ್ಷರು
ಆಲ್ ಇಂಡಿಯ ಶಫರ್ಡ್ ವೆಲ್ಫೇರ್ ಸೊಸೈಟಿ, ಮೈಸೂರು-570011
No comments:
Post a Comment