#ಹಾಲುಮತ_ಕ್ರಾಂತಿ_ಪುರುಷ
ಬೀರಪ್ಪನ ಪರಮ ಭಕ್ತ #ಗಂಡುಗಲಿ_ಕುಮಾರರಾಮ
ಗಂಗಾವತಿ: ಗ್ರಾಂಥಿಕ ರೂಪದ ದಾಖಲೆಗಳಲ್ಲಿ ಕಳೆದು ಹೋದರೂ, ಜನಪದ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿರುವ ಹಲವು ತಲೆಮಾರುಗಳನ್ನು ಯಶಸ್ವಿಯಾಗಿ ದಾಟಿಕೊಂಡು ಬಂದ ಉತ್ತರ ಕರ್ನಾಟಕದ ವೀರ ಪುರುಷರ ಪಾತ್ರಗಳಲ್ಲಿ ಕುಮ್ಮಟದುರ್ಗದ ಕುಮಾರ ರಾಮನೂ ಒಬ್ಬ.
ಕೇವಲ ಕುಮಾರರಾಮ ಎಂದರೆ ಸುಲಭವಾಗಿ ಯಾರ ಊಹೆಗೂ ನಿಲುಕದ ಪಾತ್ರ. ಆದರೆ ಕುಮಾರನ ಮುಂದೆ ‘ಗಂಡುಗಲಿ’ ಎಂಬ ಬಿರುದಾಂಕಿತ ವಿಶೇಷಣವೊಂದೇ ಸಾಕು. ಉತ್ತರ ಕರ್ನಾಟಕದ ಜನರ ಕಣ್ಣ ಮುಂದೆ 13ನೇ ಶತಮಾನದ ಸಾಂಸ್ಕೃತಿಕ ವೀರ ಪುರುಷನ ಪಾತ್ರವೊಂದು ಮಿಂಚಿಮರೆಯಾಗುತ್ತದೆ.
ಗಂಗಾವತಿ ಸಮೀಪದಲ್ಲಿರುವ ಕುಮ್ಮಟದುರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡು 13ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಗಂಡುಗಲಿ ಕುಮಾರ ರಾಮ, ತನ್ನ ಶೌರ್ಯ, ತ್ಯಾಗ, ಜನಪರವಾದ ಆದರ್ಶ ಆಡಳಿತ, ಸಹೋದರತ್ವ ಮೊದಲಾದ ವಿಶೇಷಗಳಿಂದಲೇ ಇಂದಿಗೂ ಪ್ರಸಿದ್ಧಿ ಪಡೆದಿದ್ದಾನೆ.
ಪ್ರತಿ ವರ್ಷ ಆಗಿ ಹುಣ್ಣಿಮೆ ಬಳಿಕ 8ನೇ ದಿನ (ಮೇ. 11ಸೋಮವಾರ) ರಾಮನ ಜಾತ್ರೆ ನಡೆಯುತ್ತದೆ. ಇಲ್ಲಿನ ಜಾತ್ರೆಯಲ್ಲಿ ಮಾಡಿದ ಅಕ್ಕಿಪಡಿ (ಅಕ್ಕಿ ಪಾಯಸ) ಹುಲುಗಿಗೆ ಒಯ್ದನಂತರವಷ್ಟೆ ಹುಲುಗಿ ಜಾತ್ರೆಗೆ ಶ್ರೀಕಾರ ಹಾಕುವ ಸಂಪ್ರದಾಯ ಏಳು ಶತಮಾನದಿಂದ ನಡೆದುಕೊಂಡು ಬಂದಿದೆ.
ಕುಮ್ಮಟದದುರ್ಗದ ಕೋಟೆ ಅಥವಾ ಪಾಳು ಬಿದ್ದಿರುವ ದೇವಸ್ಥಾನದಲ್ಲಿರುವ ಕುಮಾರರಾಮ, ಹೋಲಿಕೆ ರಾಮ ಮತ್ತು ಇತರ 12 ಜನ ಸಹಚರರ ತಲೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಕ್ಕಿ ದೀಪ, ಬಲಿಪೂಜೆ, ನೀರಗೂಳಿ ತುಳಿಯುವ ಮೊದಲಾದ ಧಾರ್ಮಿಕ ಕಾರ್ಯ ನಡೆಯುತ್ತವೆ. ಕುಮಾರರಾಮನಿಗೆ ಪೂಜೆ ಸಲ್ಲಿಸುವವರು ಹಾಲುಮತ ಕುರುಬಗೌಡರು. ಕುಮಾರರಾಮ ಬೀರೇಶ್ವರನ ದಳವಾಯಿಯಾಗಿದ್ದು ಬೀರೇಶ್ವರನ ಜಾತ್ರೆ ಸಂದರ್ಭದಲ್ಲಿ ಕುಮಾರರಾಮನ ಸಂಕೇತವಾಗಿ ಆತನ ರುಂಡದ ಚಿನ್ಹೆ ಪೂಜಿಸುತ್ತಾರೆ.
ಕೊಪ್ಪಳ ಗಂಗಾವತಿ ಮಧ್ಯದ ಮುಖ್ಯರಸ್ತೆಯಿಂದ ಸುಮಾರು ನಾಲ್ಕು ಕಿ.ಮೀ. ಅಂತರದಲ್ಲಿರುವ ವಿಶಾಲ ತಳಹದಿ ಬೆಟ್ಟದ ಮೇಲೆ ಜಾತ್ರೆ ನಡೆಯುತ್ತದೆ. ವಿಶೇಷವಾಗಿ ನಾಯಕ, ಬೇಡ ಜನಾಂಗದವರು ವಿವಿಧ ಜಿಲ್ಲೆಗಳಿಂದ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ರಾಮನ ಐತಿಹಾಸಿಕ ಹಿನ್ನೆಲೆ
ಕೃಪೆ: ಫೇಸ್ಬುಕ್ ಪೋಸ್ಟ್
No comments:
Post a Comment