Wednesday, 15 January 2020

ಇಷ್ಟ ಲಿಂಗವಿಷಯವನ್ನು ವಿಮರ್ಶಿಸೊಣ

#ಇಷ್ಟಲಿಂಗವಿಷಯವನ್ನು_ವಿಮರ್ಶಿಸೊಣ

"ಇಷ್ಟಲಿಂಗಮಿದಂ ಸ್ಥೂಲಂ ಯದ್ಬಾಹ್ಯೇ ಧಾರ್ಯತೇ ತನೌ |
ಪ್ರಾಣಲಿಂಗಮಿದಂ ತು ತತ್ಸೂಕ್ಷ್ಮಂ ಯದಂತರ್ಭಾವನಾಮಯಾಮಂ ||
ಪರಾತ್ಪರಂ ತು ಯತ್ವ್ರೋಕ್ತಂ ತೃಪ್ತಿ ಲಿಂಗಂ ತದುಚ್ಯತೇ||"
ಸ್ಥೂಲದೇಹದಲ್ಲಿ ಧರಿಸುವುದೆ ಇಷ್ಟಲಿಂಗವೆಂದೂ, ಸೂಕ್ಷ್ಮ ಶರೀರದಲ್ಲಿ ಧರಿಸಲ್ಪಡುವುದೇ ಪ್ರಾಣಲಿಂಗವೆಂದೂ, ಕಾರಣಶರೀರದಲ್ಲಿ ಧರಿಸಲ್ಪಡುವುದೇ ಭಾವಲಿಂಗವೆಂದೂ ಹೇಳಿಸಿಕೊಳ್ಳುವವು. ಈ ತ್ರಿವಿಧ ಲಿಂಗಗಳಿಂದ ಬಗೆಯಾಗಿರುವ ಆಚಾರಾದಿಲಿಂಗಾಗಳ ಸ್ವರೂಪವೆಂತೆಂದರೆ;

"ಆಚಾರಲಿಂಗ ಘ್ರಾಣಾಖ್ಯಂ ಭಕ್ತಸ್ಥಲಸಮಾತ್ರಯಂ |
ನಿವೃತ್ತಿ ಕಲಯೋಪೇತಂ ಗಂಥಗ್ರಹಣಸಾಧನಂ

ಗುರುಲಿಂಗ ತು ಜಿಹ್ವಾಖ್ಯಂ ಮಹೇಶಸ್ಥಲಸಂಶ್ರಯಂ|
ಪ್ರತಿಷ್ಠಾಕಲಯೋಪೇತಂ ರಸಗ್ರಹಣಸಾಧನಂ

ಶಿವಲಿಂಗಂ ತು ನೇತ್ರಾಖ್ಯಂ ಪ್ರಸಾದಿಸ್ಥಲಸಂಶಯಂ|
ವಿದ್ಯಾಕಲಾಸಮಾಯುಕ್ತಂ ರೂಪಗ್ರಹಣಸಾಧನಂ

ತ್ವಗಾಖ್ಯಂ ಜಂಗಮಲಿಂಗಂ ಪ್ರಾಣಲಿಂಗಿಸ್ಥಲಾಶ್ರಯಂ|
ಶಾಂತ್ಯಾಖ್ಯ ಕಲಯೋಪೇತಂ ಸ್ವರ್ಶಗ್ರಹಣಸಾಧನಂ

ಪ್ರಸಾದಲಿಂಗಂ ಶ್ರೋತ್ರಾಖ್ಯಂ ಶರಣಸ್ಥಲಸಂಶ್ರಯಂ|
ಶಾಂತ್ಯತೀತಕಲೋಪೇತಂ ಶಬ್ದಗ್ರಹಣಸಾಧನಂ
ಮಾನಸಂ ತು ಮಹಾಲಿಂಗಮೈಕ್ಯಸ್ಥ ಲಸಮಾಶ್ರಯಂ|
ಶಾಂತ್ಯತೀತೋತ್ತರೋಪೇತಂ ಸರ್ವಗ್ರಹಣಸಾಧನಂ "

ಘ್ರಾಣರೂಪವಾದ ಆಚಾರಲಿಂಗವು ಭಕ್ತಸ್ಥಲವನ್ನಾಶ್ರಯಿಸಿ,ನಿವೃತ್ತಿ ಕಲಾಯುಕ್ತವಾಗಿ, ಗಂಥಗ್ರಹಣಸಾಧನವಾಗಿರುವುದು. ಘ್ರಾಣವು ಇಡಾಪಿಂಡಗಳಾನಾಡೀದ್ವಾರಾ ಪ್ರಾಣವಾಯುವಿನ ಸಂಚಾರಕ್ಕೆ ಆಸ್ರಯವಾಗಿರುವುದರಿಂದಲೂ,ದೇಹಶುದ್ದಿಗೆ ಹೇತುಭೂತವಾದ ಪ್ರಾಣಯಾಮಚರಣೆಗೆ ಸಾಧನವಾದುದರಿಂದಲೂ ಇದಕ್ಕೆ "#ಆಚಾರಲಿಂಗ" ನಾಮ ಪ್ರಪ್ತವಾಗಿದೆ.

ಜಿಹ್ವಾರೂಪವಾದ ಗುರುಲಿಂಗವು ಮಹೇಶ್ವರಸ್ಥಲವನ್ನಾಶ್ರಯಿಸಿ,ಪ್ರತಿಷ್ಠಾಕಲಾಯುಕ್ತವಾಗಿ ರಸಗ್ರಹಣಸಾಧನಬವಾಗಿರುವುದು. ಜಿಹ್ವೆಯು ಷಡಕ್ಷರಮಂತ್ರದ ಉಚ್ಚಾರಕ್ಕೆ ಸಾಧನವಾದುದರಿಂದಲೂ,ಈ ಮಾಹಾಮಂತ್ರವು ಮಂತ್ರ ಮೂರ್ತಿಯಾದ ಗುರುವಿನ ಮುಖದಿಂದ ಪ್ರಾಪ್ತವಾಗುವುದರಿಂದಲೂ ಇದಕ್ಕೆ "#ಗುರಯಲಿಂಗ" ಎಂಬ ನಾಮವು ಪ್ರಾಪ್ತವಾಗಿದೆ.

ನೇತ್ರರೂಪವಾದ ಶಿವಲಿಂಗವು ಪ್ರಸಾದಿಸ್ಥಲವನ್ನಾಶ್ರಯಿಸಿ, ವಿದ್ಯಾಕಲಾಯುಕ್ತವಾಗಿ,ರೂಪಗ್ರಹಣಸಾಧನವಾಗಿರುವುದು, ನೇತ್ರವು ತನ್ನ ಗೋಳಕದಲ್ಲಿರುವ ಶಿವಪ್ರಕಾಶದಿಂದ ಸಂಯುಕ್ತವಾಗಿ ಸಕಲರೂಪ ಪ್ರದಾರ್ಥಪ್ರಕಾಶಕ್ಕೆ ಸಾಧನವಾದುದರಿಂದ ಇದಕ್ಕೆ" #ಶಿವಲಿಂಗ "ಎಂಬ ನಾಮ ಪ್ರಾಪ್ತವಾಗಿದೆ.

ತ್ವಗ್ರೊಪವಾದ ಚರಲಿಂಗವು ಪ್ರಾಣಲಿಂಗಿಸ್ಥಲವನ್ನಾಶ್ರಯಿಸಿ.ಶಾಂತಿಕಲಾಯುಕ್ತವಾಗಿ, ಸ್ಪರ್ಶ ಗ್ರಹಣಸಾಧನವಾಗಿರುವುದು. ತ್ವಕ್ಕುವಸರ್ವಾಂಗವನ್ನು ವ್ಯಾಪಿಸಿ ಶೀತಸ್ವರ್ಶಾದಿಜ್ಞಾನಕ್ಕೆ ಸಾಧನವಾದುದರಿಂದಲೂ, ಇದು ಸಂಚರಣಶೀಲವಾದ ವಾಯುವಿನ ಅಂಗವಾಗಿರುವುದರಿಂದಲೂ ಇದಕ್ಕೆ "#ಚರಲಿಂಗ" ಎಂಬ ನಾಮ ಪ್ರಾಪ್ತವಾಗಿದೆ.

ಶ್ರೋತ್ರರೂಪವಾದ ಪ್ರಸಾದಲಿಂಗವು ಶರಣಸ್ಥಲವನ್ನಾಶ್ರಯಿಸಿ, ಶಾಂತ್ಯತೀತಕಲಾಯುಕ್ತವಾಗಿ ಶಬ್ದ ಗ್ರಹಣಸಾಧನವಾಗಿರುವುದು. ಶ್ರೋತ್ರವು ಶಬ್ದಗ್ರಹಣಕ್ಕೆ ಸಾಧನವಾದುದರಿಂದಲೂ, ನಾಸಸುನಾದ ನೀನಾದ-ಮಹಾನಾದರೂಪ ಪರಾ-ಪಶ್ಯಂತಿ-ಮಧ್ಯಮಾ ಮೈಖರೀಕ್ರಮ ದಿಂದ ಪ್ರಾಪ್ತವಾಗಿವ ಅನುಗ್ರಹರೂಪಪ್ರಸಾದಕ್ಕೆ ಹೇತುವಾಗಿರುವುದರಿಂದಲೂ ಇದಕ್ಕೆ "#ಪ್ರಸಾದಲಿಂಗ" ಎಂಬ ನಾಮವು ಪ್ರಾಪ್ತವಾಗಿದೆ.

ಮನೋರೂಪವಾದ ಮಹಾಲಿಂಗವು ಐಕ್ಯಸ್ಥಲವನ್ನಾಶ್ರಯಿಸಿ, ಶಂತ್ಯತೀತ್ತೋರಕಲಾಯುಕ್ತವಾಗಿ, ಸರ್ವಗ್ರಹಣಸಾಧನವಾಗಿರುವುದು. ಮನಸ್ಸು ಶ್ರೋತ್ರಾದೀಂದ್ರಿಯಗಳಂತೆ ಒಂದೊಂದು ವಿಷಯವನ್ನು ಗ್ರಹಿಸದೆ ಸರ್ವವಿಷಯಗಳನ್ನೂ ಗ್ರಹಿಸುವುದರಿಂದಲೂ,ಇಂದ್ರಿಯಗಳಿಗೆಲ್ಲಾ ಮಹಾರಾಜನಾಗಿರುವುದರಿಂದಲೂ ಇದಕ್ಕೆ "#ಮಹಾಲಿಂಗ" ಎಂಬ ನಾವವು ಪ್ರಾಪ್ತವಾಗಿದೆ.

 "#ದಿನಾಂಕ ೨-೪-೧೯೩೫ರಲ್ಲಿ ಮೈಸೂರು ರಾಜಧಾನಿಯ ತತ್ವಶಾಸ್ತ್ರ ಮಹಾಸಭೆಯಲ್ಲಿ ನೆರವೇರಿದ #ಶಕ್ತಿವಿಶಿಷ್ಟಾದ್ವೈತಸಿದ್ದಾಂತನಿರೂಪಣೆಯ ಇಷ್ಟಲಿಂಗ ವಿಮರ್ಶೆ."

#ಗುರುಚರಣರಜ
ನವೀನ್ ಆರ್ಯಕ್ಷತ್ರಿಯ

No comments:

Post a Comment

ಕಂಬಳಿ ಹುಟ್ಟಿದ ಪ್ರಸಂಗ

ಕಂಬಳಿ ಹುಟ್ಟಿದ ಪ್ರಸಂಗ ☜☆☞☜☆☞☜☆☞☜☆☞ ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ಸ್ವಾಮಿ ನಮ್ಮಯ ಗುರುವು ಬಂದಾನ ಬನ್ನಿರೇ  ಸ್ವಾಮಿ ನಮ್ಮಯ ರೇವಣನು ಬಂದಾನ ...