Wednesday, 15 January 2020

ಮೂಲ ಕುಂಚಿಟಿಗ ಇತಿಹಾಸ


#ಮೂಲ_ಗೊತ್ತಿಲ್ಲದ_ಕೆಲವು_ಕುಂಚಿಟಿಗರಿಗೆ_ತಿಳಿಸಿ
(ಗೌಡ ಹೆಸರು ಕೊಟ್ಟಿದ್ದು ಕುರುಬಗೌಡರು) 
ಕುಂಚ ತಗೊಂಡು ಕುಂಚಿಟಿಗರಾಗಿದ್ದು ಅವರ ಮೂಲ ಕೂಡ ಪಶು ಸಾಕಾಣಿಕೆ 
#ಶೇರ್_ಮಾಡಿ
ಕುಂಚಿಟಿಗ
ಜಲದೇನವರು 
ಬೊಪ್ಪರಾಯಗೌಡ 
ಜೈ ಬೀರಲಿಂಗೇಶ್ವರ 


ಮೂಲಪುರುಷ – ಕುರುಬಗೌಡ
#ಜಲಧಿಬೊಪ್ಪರಾಯಗೌಡ

ಕಟ್ಟೇಮನೆ – ಬೆಜ್ಜಿಹಳ್ಳಿ , ಹುಲಿಕುಂಟೆ ಹೋಬಳಿ, ಸಿರಾ ತಾಲ್ಲೂಕು.
ಮನೆದೇವರು – ಜಲಧಿಬೊಪ್ಪರಾಯ, ಬೆಜ್ಜಿಹಳ್ಳಿ, ಸಿರಾ ತಾಲ್ಲೂಕು.
ಕುಲಗುರುಗಳು- ಶ್ರೀ ಶೈಲ ಮಹಾಸ್ವಾಮಿಗಳು ಹಾಗೂ ವೃಷಬೇಂದ್ರ ಸ್ವಾಮಿಗಳು.
ಗುರುಮನೆ- ಗೋಸಿಕೆರೆ , ಚಳ್ಳಕೆರೆ ತಾಲ್ಲೂಕು.
ಗುಡಿಕಟ್ಟುಗಳು – 5
ಅಮಾವಾಸ್ಯೆ ಮನೆಗಳು- 33

ಜಲಧಿ ಕುಂಚಿಟಿಗರ ಕುಲದ ಇತಿಹಾಸ.
ಜಲಧಿಬೊಪ್ಪರಾಯರ ಇತಿಹಾಸ, ಬೆಜ್ಜಿಹಳ್ಳಿ,

ಕ್ರಿ.ಶ.1172 ನೇ ಇಸವಿ ದೆಹಲಿಯ ಸುಲ್ತಾನರ ಕಾಟಕ್ಕೆ ತಮ್ಮ ಹಾಲಿನಂತಹ ಸಮುದಾಯಕ್ಕೆ ಕಳಂಕ ಬರುತ್ತದೆ ಎನ್ನುವುದನ್ನು ತಿಳಿದು, ಹಾಗೂ ತಮ್ಮ ಕುಲಬಾಂಧವರ ಹಿತರಕ್ಷಣೆಗೆ ನಿಂತ ನಮ್ಮ ನಾಯಕರು ತಮ್ಮ ಸಂಸಾರ ಹಾಗೂ ದನಕರುಗಳ ಸಮೇತ ಕುಂಚಿಟಿಗ ಸಮುದಾಯವು ವಿಂಧ್ಯ ಪರ್ವತದಿಂದ ರಭಸದಿಂದ ದಕ್ಷಿಣ ದೇಶಕ್ಕೆ ಬರುತ್ತಿರುವಾಗ ಅವರು ರಭಸದಿಂದ ಹರಿಯುತ್ತಿರುವ ನದಿಯನ್ನ ದಾಟಿ ಹೋಗಬೇಕಾದ ಪ್ರಸಂಗ ಬಂದಿತು.
ಆಗ ಗುರುಭಕ್ತ ಸಂಪನ್ನನಾದ ಬೊಪ್ಪರಾಯನು 48 ಕುಲಗೋತ್ರದವರಿಗೂ ದಾರಿಯನ್ನು ಬಿಡುವಂತೆ ನದಿದೇವತೆಯನ್ನ ಪ್ರಾರ್ಥಿಸಿ ಆಕೆಯ ಸಂತೋಷಕ್ಕಾಗಿ ತನ್ನ ಶಿರಸ್ಸನ್ನು ಛೇದಿಸಿ ದೇವಿಗೆ ಅರ್ಪಿಸಿದನು.
ದೇವಿ ಪ್ರಸನ್ನಳಾಗಿ ಅವರಿಗೆಲ್ಲಾ ದಾರಿಯನ್ನು ಮಾಡಿಕೊಟ್ಟಳು.

ಅವನ ಭಕ್ತಿಗೆ ಮೆಚ್ಚಿ ಸಾರ್ವಾಡ ಗುರುಗಳು ಅವನ ರುಂಡ ಮುಂಡಗಳನ್ನ ಕೂಡಿಸಿ ಅವನಿಗೆ ಪ್ರಾಣಧಾನ ನೀಡಿದರು.
ಆಗ ಶಿಷ್ಯನ ಕೈಯಲ್ಲಿ ಕುಂಚ ಇದ್ದುದರಿಂದ ಶಿಷ್ಯನ ಜ್ಞಾಪಕಾರ್ಥವಾಗಿ 48 ಕುಲಕ್ಕೂ ಕುಂಚಿಟಿಗರೆಂದು ನಾಮಕರಣ ಮಾಡಿದ್ದಲ್ಲದೆ ನದಿಯನ್ನ ದಾಟಿಸಿದಕ್ಕಾಗಿ ಆತನಿಗೆ ಜಲಧಿಬೊಪ್ಪರಾಯ ನೆಂದು ನಾಮಕರಣ ಮಾಡಿದರು.

ಜಲಧಿಬೊಪ್ಪರಾಯ ನೆಂದು ನಾಮಕರಣ ಮಾಡಿರುವ ಉದ್ದೇಶ ನೀರನ್ನ ಭಾಗ ಮಾಡಿ ದಾರಿಯನ್ನ ಮಾಡಿಕೊಟ್ಟಿದ್ದರಿಂದ ನೀರಿಗೆ ಒಡೆಯನೆಂದು ಅರ್ಥದಿಂದ ಮಾಡಿರಬಹುದು.
ಏಕೆಂದರೆ ಜಲಧಿ ಎಂದರೆ ಜಲ, ಬೊಪ್ಪ ಎಂದರೆ ತಂದೆ ಎಂದು ಅರ್ಥ ಬರುತ್ತದೆ.

ಹೀಗೆ ಗುರುಗಳು ಶಿಷ್ಯರೊಡಗೂಡಿ ದಕ್ಷಿಣ ದೇಶದಲ್ಲಿ ಫಲ ವಸತಿಗಳಿಗೆ ಅನುಕೂಲಕರವಾದ ಎಡೆಗಳಲ್ಲಿ ತಮ್ಮ ಶಿಷ್ಯರೊಡನೆ ನೆಲೆಗೊಳಿಸಿ ತಾವು ಧರ್ಮಸ್ವರೂಪವನ್ನು ಜನರಿಗೆ ತಿಳಿಯಪಡಿಸಲು ನಂದನಹೊಸೂರಿನಲ್ಲಿ ಕೆಲವು ಕಾಲ ತಪಸ್ಸು ಮಾಡಿದರು.

ನಂತರ ತನ್ನ ಶಿಷ್ಯ ಜಲಧಿಬೊಪ್ಪರಾಯ ನನ್ನು ಕರೆದುಕೊಂಡು ಬಂದು ಶಾಲಿವಾಹನ ಶಕ 1173 ರಲ್ಲಿ ಶಿರಾ ತಾಲ್ಲೂಕಿನ ಬೆಜ್ಜಿಹಳ್ಳಿ ಯಲ್ಲಿ ನೆಲಸಿದರು.
ಈ ಶಿಷ್ಯನು ಜಲಧಿ ಗೋತ್ರದ ಮೂಲಪುರುಷ ಹಾಗೂ 48 ಗೋತ್ರದವರನ್ನು ಉದ್ದಾರ ಮಾಡಿದ ಮಹಾತ್ಮ.
ಅದಕ್ಕೆ ಬೆಜ್ಜಿಹಳ್ಳಿಯನ್ನ ಜಲಧಿ ಗೋತ್ರದವರ ಹಾಗೂ ಕುಂಚಿಟಿಗರ ಪುಣ್ಯಕ್ಷೇತ್ರ ವೆಂದು ಕರೆಯುತ್ತಾರೆ.

ಅಲ್ಲಿನ ಪೂಜಾರರನ್ನ ಇಂದಿನ ಸ್ಥಿತಿಗತಿ ಬಗ್ಗೆ ವಿಚಾರಿಸಿದಾಗ
ಜಲಧಿ ಗೋತ್ರದವರು 5 ಬುಡಕಟ್ಟು 33 ಅಮಾವಾಸ್ಯೆ ಮನೆಗಳನ್ನ ಮಾಡಿಕೊಂಡು ಪುಣ್ಯಕ್ಷೇತ್ರವನ್ನ ಮರೆತಿದ್ದಾರೆ. ಇಂತಹ ಪುಣ್ಯಕ್ಷೇತ್ರ ವನ್ನ ಮರೆತಿದ್ದರಿಂದ ಸದರಿ ಕ್ಷೇತ್ರವು ಹೀನಾಯ ಸ್ಥಿತಿಯಲ್ಲಿದ್ದು ಬಿದ್ದು ಹೋಗುವ ಸ್ಥಿತಿಗೆ ಬಂದಿರುತ್ತದೆ.

ಇದನ್ನ ಮನಗೊಂಡು ಈ ಹಿಂದೆ 1975 ರಲ್ಲಿ ಸ್ವಾಮಿಯ ದೇವಸ್ಥಾನದ ಕಟ್ಟಡದ ಜೀರ್ಣೋದ್ಧಾರ ಮಾಡಬೇಕೆಂದು ತಮ್ಮ ಸಮುದಾಯದ ಹಲವಾರು ಮುಖಂಡರು, ಅಣ್ಣತಮ್ಮಂದಿರು ಹಾಗೂ ಭಕ್ತಾಧಿಗಳು ಸಭೆ ಸೇರಿ ಇದ್ದ ಗೋಡೆ ಗೋಪುರಗಳನ್ನ ಕೀಳಿಸಿ ಬಯಲು ಮಾಡಿ ಈಗ್ಗೆ 42 ವರ್ಷಗಳು ಕಳೆದವು.
ಸದರಿ ಕೆಲಸವು ಅಲ್ಲಿಗೆ ಮೊಟುಕಾಗಿ ದೇವಸ್ಥಾನದ ಒಳಗಡೆ ದನಕರುಗಳು, ಕೋಳಿಗಳು, ಹಂದಿ ನಾಯಿಗಳಿಗೆ ವಾಸ ಮಾಡಲು ಅನುವುಮಾಡಿ ಕೊಟ್ಟರು ಎಂದು ತಮ್ಮ ನೋವನ್ನು ತೋಡಿಕೊಂಡರು.

ಮಾಹಿತಿ ಒದಗಿಸಿದವರು

ಪ್ರಧಾನ ಅರ್ಚಕರು, ಬೆಜ್ಜಿಹಳ್ಳಿ.
ಪೂಜಾರರು- ಮುದ್ದಪ್ಪ – 9535260387
ನಟರಾಜು- 9980322929.

ಜಲಧೇನವರ ಮನೆದೇವರುಗಳು.
1) ಅರಸೀಕೆರೆ ಗುಡಿಕಟ್ಟು – 8 ಅಮಾವಾಸ್ಯೆ
2)ಐಮಂಗಲ ಗುಡಿಕಟ್ಟು – 8 ಅಮಾವಾಸ್ಯೆ
3)ಮೊಸರುಕುಂಟೆ ಗುಡಿಕಟ್ಟು – 3 ಅಮಾವಾಸ್ಯೆ
4)ನಾದೂರು ಗುಡಿಕಟ್ಟು – 6 ಅಮಾವಾಸ್ಯೆ
5)ಗುಡ್ಡದ_ಬೇವಿನಹಳ್ಳಮ್ಮನ ಗುಡಿಕಟ್ಟು- 8 ಅಮಾವಾಸ್ಯೆ.

1)ಅರಸೀಕೆರೆ ಗುಡಿಕಟ್ಟಿಗೆ ಸೇರಿದ ಅಮಾವಾಸ್ಯೆ ದೇವರುಗಳು -8
೧) ಪಾವಗಡ ತಾಲ್ಲೂಕು ಅರಸೀಕೆರೆಯ ತಾಯಿಮುದ್ದಮ್ಮ ದೇವತೆ.

೨) ಮಡಕಸಿರಾ ತಾಲ್ಲೂಕು (ಮಾದಲೂರು ಹತ್ತಿರ) ಕೊಮರೇನಹಳ್ಳಿ ಗುರುಬೀರಲಿಂಗೇಶ್ವರ.

೩)ಪಾವಗಡ ತಾಲ್ಲೂಕು ಮರೂರು ವೀರನಾಗಪ್ಪ

೪) ಹಿರಿಯೂರು ತಾಲ್ಲೂಕು ಕುರುಬರಹಳ್ಳಿ ( ಮಾರಿಕಣಿವೆ ಹತ್ತಿರ) ಲಕ್ಷ್ಮಿ ದೇವತೆ.

೫) ಚಳ್ಳಕೆರೆ ತಾಲ್ಲೂಕು ಗೋಸಿಕೆರೆ, ದೊಡ್ಡಬೀರನಹಳ್ಳಿ ಯ ತಾಯಿಮುದ್ದಮ್ಮ ದೇವತೆ.

” ಮಾಂಗಲ್ಯ ರೂಪದಲ್ಲಿ ಬಂದ ದೇವಿ ”
ನಂಬಿದ ಭಕ್ತರಿಗೆ ಇಂಬು ನೀಡುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡಬೀರನಹಳ್ಳಿ
” ತಾಯಿ ಮದ್ದಮ್ಮ ದೇವತೆ ”

ದೊಡ್ಡಬೀರನಹಳ್ಳಿ ಯ ಗ್ರಾಮದ ದೇವತೆ
” ತಾಯಿ ಮದ್ದಮ್ಮ ದೇವತೆ ” ನಂಬಿ ಬಂದ ಭಕ್ತರನ್ನ ಕೈಬಿಡದೆ ಅಭಯ ನೀಡುತ್ತಿದ್ದಾಳೆ.

ಕುಂಚಿಟಿಗ ಸಮುದಾಯದ ಜಲಧಿಬೊಪ್ಪರಾಯನ ಕುಲ/ಗೋತ್ರದ ಜಲಧಿ ಬೆಡಗಿನವರು ಆರಾಧಿಸುವ ದೇವತೆಗೆ ದೀರ್ಘ ಇತಿಹಾಸವಿದೆ.
ಸುಮಾರು ವರ್ಷಗಳ ಹಿಂದೆ ದೊಡ್ಡಬೀರನಹಳ್ಳಿ ಗ್ರಾಮದ ಹೆಣ್ಣುಮಗಳು ತನ್ನ ಮಕ್ಕಳೊಂದಿಗೆ ದೇವಿ ಮೂಲಸ್ಥಾನದ ಅರಸೀಕೆರೆಗೆ ತೆರಳಿ ಪೂಜೆ ಮಾಡಿಸಿಕೊಂಡು ಸ್ವಗ್ರಾಮದ ಕಡೆ ಮರಳುತ್ತಾಳೆ.
ಗ್ರಾಮಕ್ಕೆ ವಾಪಸ್ಸು ಬರುವಾಗ ದಾರಿಮದ್ಯೆ ಊಟಕ್ಕೆ ಕುಳಿತಾಗ ಪ್ರಸಾದದ ಗಂಟಲ್ಲಿ ದೇವಿಯ ಮಾಂಗಲ್ಯ ಪತ್ತೆಯಾಗುತ್ತೆ. ಇದನ್ನು ಕಂಡು ಆಕೆ ಗಾಬರಿಗೊಂಡು ಅಯ್ಯೋ ದೇವಿ ಒಡವೆ ಪ್ರಸಾದದಲ್ಲಿ ಬಂದಿದೆ. ದೇವಸ್ಥಾನಕ್ಕೆ ಕೊಡೊಣೋವೆಂದು ಹಿಂದಿರುಗಿದಾಗ ಆಕೆಗೆ ಕಣ್ಣು ಕಾಣಿಸಿದಂತಾಗುತ್ತದೆ. ತಮ್ಮೂರತ್ತ ಮಾತ್ರ ಹೊರಟಾಗ ಕಣ್ಣು ಕಾಣಿಸುತ್ತದೆ. ಕೊನೆಗೆ ದೇವಸ್ಥಾನಕ್ಕೆ ಹೋಗುವ ಪ್ರಯತ್ನ ವಿಫಲಗೊಂಡು ಮಕ್ಕಳೊಂದಿಗೆ ದೊಡ್ಡಬೀರನಹಳ್ಳಿಯತ್ತ ಮರಳುತ್ತಾರೆ.

ರೈತನ ಕೈ ಸೇರಿದ ಮಾಂಗಲ್ಯ: ದೇವಿ ಮಾಂಗಲ್ಯವನ್ನು ಮನೆಯಲ್ಲಿನ ರಾಗಿ ಧಾನ್ಯದ ಕಣಜದಲ್ಲಿ ಊಣುತ್ತಾಳೆ. ಅದೇ ದಿವಸ ಹಿರಿಯೂರು ತಾಲ್ಲೂಕು ಬುರುಡುಗುಂಟೆ ಗ್ರಾಮದ ರೈತನೊಬ್ಬ ರಾಗಿಯನ್ನ ಕೊಳ್ಳಲು ಆಕೆ ಮನೆಗೆ ಬರುತ್ತಾನೆ. ಕಣಜದಲ್ಲಿದ್ದ ರಾಗಿಯನ್ನ ಅಳೆದು ಕೊಡುವ ವೇಳೆ ಮರೆತು ದೇವಿ ಮಾಂಗಲ್ಯ ರೈತರ ಬಳಿ ಸೇರುತ್ತೆ.
ಆಗ ರೈತ ಕೊಂಡ ರಾಗಿಯಲ್ಲಿ ಪತ್ತೆಯಾದ ಮಾಂಗಲ್ಯದೊಂದಿಗೆ ಆಚಾರಿಯೊಬ್ಬರ ಬಳಿ ಹೋಗಿ ಕರಗಿಸಲು ಕೊಡುತ್ತಾನೆ. ಅದು ಆಚಾರಿಯಿಂದ ಅಸಾಧ್ಯವಾಗುತ್ತದೆ.

ಮಾಯಾ ರೂಪ: ಕೊನೆಗೆ ದೇವಿ ಇದರಿಂದ ಮನನೊಂದು ನನ್ನ ಬೆಡಗಿನ ಜಲಧಿ ಭಕ್ತರು ಬುರುಡುಕುಂಟೆ ಗ್ರಾಮದಲ್ಲಿ ಅನ್ನನೀರು ಸೇವಿಸುದಾಗಲಿ, ಕೂಡುಕೊಳ್ಳುವ ಸಂಬಂಧ ಬೆಳೆಸುವುದಾಗಲಿ ಮಾಡದಂತಾಗಲಿ ಎಂದು ಶಾಪ ಹಾಕುತ್ತಾಳೆ. ಅಲ್ಲಿಂದ ದೇವಿ ಮಾಂಗಲ್ಯ ಮಾಯಾ ರೂಪತಾಳಿ ಮತ್ತೆ ದೊಡ್ಡಬೀರನಹಳ್ಳಿ ಗ್ರಾಮದ ಹೊಲ ಮರೆ ಬಳಿಯ ತುಗ್ಗಲಿ ಮರದಲ್ಲಿ ಬಂದು ಸೇರುತ್ತಾಳೆ.

ಹೀಗಿರುವಾಗ ದೊಡ್ಡಬೀರನಹಳ್ಳಿ ಗ್ರಾಮದ ಕವಳೆಹಣ್ಣು ವ್ಯಾಪಾರಿ ಅಜ್ಜಿಯೊಂದು ನಿತ್ಯ ಮಾರ್ಗವಾಗಿ ಸಂಚರಿಸುವಾಗ ತುಗ್ಗಲಿ ಮರದ ಬಳಿ ಸಾಗುವ ವೇಳೆ ನಾನು ಬರುತ್ತೇನೆ ಎಂಬ ಅಶಿರೀರವಾಣಿ ಶಬ್ದ ಕೇಳಿಸುತ್ತದೆ. ಆಗ ಅಜ್ಜಿ ಒಂದು ದಿನ ನೀನು ಯಾರು ಎಂದು ಕೇಳುತ್ತಾಳೆ ಅದಕ್ಕೆ ದೇವಿ ನಾನು ” ತಾಯಿ ಮದ್ದಮ್ಮ ದೇವಿ ” ನಿಮ್ಮೂರಿಗೆ ಬರುತ್ತೇನೆ ನನ್ನನ್ನು ಹೊಸ ಮಡಿಕೆಯಲ್ಲಿ ಇರಿಸಿಕೊಂಡು ಗ್ರಾಮಕ್ಕೆ ಕರೆದೊಯ್ಯಬೇಕು ಎಂದು ವಾಗ್ದಾನ ಕೊಡುತ್ತಾಳೆ.

ಕೂಡಲೇ ಅಜ್ಜಿ ಗ್ರಾಮದ ಮುಖ್ಯಸ್ಥರಿಗೆ ವಿಷಯ ತಿಳಿಸುತ್ತಾಳೆ. ಸುದ್ದಿ ತಿಳಿದ ಊರಿನ ಜನರು ಒಂದು ದಿನ ಭಕ್ತಿಯಿಂದ ಜಾನಪದ ವಾಧ್ಯದ ಮೂಲಕ ದೇವಿ ಹೇಳಿದ ಹಾಗೆ ನಡೆದು ದೇವಿಯನ್ನು ಊರಿಗೆ ಕರೆತಂದು ನೂತನ ಚಪ್ಪರದಡಿ ದೇವಿಯನ್ನ ಪ್ರತಿಷ್ಠಾಪಿಸುತ್ತಾರೆ.ಈಗೆ ಭಕ್ತಿಯಿಂದ ಪೂಜಿಸಿಕೊಂಡು ಜಾತ್ರೆ, ಕಾರ್ತಿಕ , ಉತ್ಸವ ಇನ್ನಿತರೆ ಧಾರ್ಮಿಕ ಕಾರ್ಯ ಕೈಗೊಳ್ಳುತ್ತಿದ್ದಾರೆ.

ಜತೆಗೆ ದೇವಿ ನುಡಿದಂತೆ ಇವತ್ತಿಗೂ ಸಹ ಬುರುಡುಕುಂಟೆ ಗ್ರಾಮದಲ್ಲಿ ಈ ದೇವರಿನ ಕುಲ/ಬೆಡಗಿವರು ಊಟ ಮಾಡುವುದಾಗಲಿ, ನೀರು ಕುಡಿಯುವುದಾಗಲಿ, ಕೂಡುಕೊಳ್ಳುವ ಸಂಬಂಧ ಬೆಳೆಸುವುದಾಗಲಿ ಮಾಡುತ್ತಿಲ್ಲ ಎನ್ನುತ್ತಾರೆ ಊರಿನ ಜಲಧಿವಂಶದ ಪ್ರಮುಖರು.

ವಿಶೇಷ ಪೂಜೆ : ಪಾವಗಡ ತಾಲ್ಲೂಕು ಮರೂರು ವೀರನಾಗಪ್ಪ , ಹಿರಿಯೂರು ತಾಲ್ಲೂಕಿನ ಬೆಜ್ಜಿಹಳ್ಳಿ ಜಲಧಿಬೊಪ್ಪರಾಯ, ನೆರೆ ಆಂದ್ರಪ್ರದೇಶದ ಮಡಕಸಿರಾ ತಾಲ್ಲೂಕು ಕೊಮರೇನಹಳ್ಳಿ ಬೀರಲಿಂಗೇಶ್ವರ, ಹೊಸದುರ್ಗ ತಾಲ್ಲೂಕು ಬೇವಿನಹಳ್ಳಿ ಗುಡ್ಡದ ಬೇವಿನಳ್ಳಮ್ಮ ದೇವಿ ಪರಿವಾರದ ದೇವರು . ಈ ದೇವರಿಗೆ ಜಲಧಿಬೆಡಗಿನ ವಂಶಸ್ಥರು ಹಬ್ಬ ಜಾತ್ರೆಗಳಲ್ಲಿ ಭಕ್ತಿಯಿಂದ ಪೂಜಿಸುತ್ತಾ ಬಂದಿದ್ದಾರೆ.

ತಾಯಿ ಮದ್ದಮ್ಮ ದೇವಿ ಮೈಮೇಲೆ ಬಂದು ಹೇಳಿಕೆ ನೀಡುವುದಾಗಲಿ, ಹೂವು ಕೊಡುವುದಾಗಲಿ ಮಾಡಿಲ್ಲ.
ಭಕ್ತಿಯಿಂದ ನಡೆದ ಭಕ್ತರಿಗೆ ಮಾತ್ರ ಬೇಡಿದ ವರ ಕರುಣಿಸುತ್ತಾಳೆ.
ಮಾಹಿತಿ:-ತಿಪ್ಪೇಸ್ವಾಮಿ, ಅರ್ಚಕರು,

೬) ಮಡಕಸಿರಾ ತಾಲ್ಲೂಕು ಇಟ್ಟಿಗೆಹಳ್ಳಿ ರಂಗಧಾಮಸ್ವಾಮಿ
೭) ಹಿರಿಯೂರು ತಾಲ್ಲೂಕು ಕ್ಯಾತಗೊಂಡನಹಳ್ಳಿ ಲಕ್ಷ್ಮೀ ದೇವತೆ.
೮) ಚಿಕ್ಕನಾಯಕನಹಳ್ಳಿ ತಾಲೂಕು ಚೋರಚಿಕ್ಕನಹಳ್ಳಿ ತಿಮ್ಮನಹಳ್ಳಿ ಲಕ್ಷ್ಮೀ ದೇವತೆ.

ಅರಸೀಕೆರೆ ಗುಡಿಕಟ್ಟಿಗೆ ಸೇರಿದ ಬಂಡಿಗಳು.
೧) ಕುರುಬರಹಳ್ಳಿ ಬಂಡಿ.
೨) ರಾಗಲಹಳ್ಳಿ ಬಂಡಿ.
೩) ಜಂಗಮರಹಳ್ಳಿ ಬಂಡಿ.
೪) ಆರೋನಹಳ್ಳಿ ಬಂಡಿ.
೫) ಪಾವಗಡ ತಾಲ್ಲೂಕು ಮರೂರು ಬಂಡಿ
೬) ಮಧುಗಿರಿ ತಾಲ್ಲೂಕು ಸ್ವಾರಚಿಕ್ಕನಹಳ್ಳಿ
(ಲಕ್ಷ್ಮೀ ದೇವಿಪುರ)

2) ಐಮಂಗಲ ಗುಡಿಕಟ್ಟಿಗೆ ಸೇರಿದ ಅಮಾವಾಸ್ಯೆ ದೇವರುಗಳು – 8
೧) ಹಿರಿಯೂರು ತಾಲ್ಲೂಕು ಐಮಂಗಲ ಕೆಂಚಮ್ಮದೇವತೆ.
೨)ಚಳ್ಳಕೆರೆ ತಾಲ್ಲೂಕು ತೊರೆಬೀರನಹಳ್ಳಿ ಆಂಜನೇಯ ಸ್ವಾಮಿ.
೩) ಹಿರಿಯೂರು ತಾಲ್ಲೂಕು ರಂಗೇನಹಳ್ಳಿ ಲಕ್ಷ್ಮೀದೇವತೆ.
೪) ಹಿರಿಯೂರು ತಾಲ್ಲೂಕು ಕಂಬತ್ತನಹಳ್ಳಿ ಲಕ್ಷ್ಮೀದೇವತೆ.
೫) ಹಿರಿಯೂರು ತಾಲ್ಲೂಕು ನಾರಾಯಣಪುರದ ಮುಂಡದದೇವರು.
೬) ಚಳ್ಳಕೆರೆ ತಾಲ್ಲೂಕು ಜಂಪಣ್ಣನಾಯಕನ ಕೋಟೆ ಲಕ್ಷ್ಮೀ ದೇವತೆ.
೭) ಪಾವಗಡ ತಾಲ್ಲೂಕು ರಘುವನಹಳ್ಳಿ ಲಕ್ಷ್ಮೀ ದೇವತೆ.
೮) ಸಿರಾ ತಾಲ್ಲೂಕು ಬೆಜ್ಜಿಹಳ್ಳಿಯ ತುಪ್ಪದಮ್ಮ ದೇವತೆ.

3) ಮೊಸರುಕುಂಟೆ ಗುಡಿಕಟ್ಟಿಗೆ ಸೇರಿದ ಅಮಾವಾಸ್ಯೆ ದೇವರುಗಳು -3
೧) ಸಿರಾ ತಾಲ್ಲೂಕು ಮೊಸರುಕುಂಟೆ ಲಕ್ಷ್ಮೀ ದೇವತೆ.

೨) ಸಿರಾ ತಾಲ್ಲೂಕು ಭೂವನಹಳ್ಳಿಯ ಲಕ್ಷ್ಮೀ ದೇವತೆ.
೩) ಹಿರಿಯೂರು ತಾಲ್ಲೂಕು ಲಕ್ಕೇನಹಳ್ಳಿಯ ಏಳು ಮಂದಕ್ಕ ದೇವತೆ.

4) ನಾದೂರು ಗುಡಿಕಟ್ಟಿಗೆ ಸೇರಿದ ಅಮಾವಾಸ್ಯೆ ದೇವರುಗಳು – 6
೧) ಸಿರಾ ತಾಲ್ಲೂಕಿನ ನಾದೂರು ರಾಮಲಿಂಗೇಶ್ವರ.

೨) ಮಧುಗಿರಿ ತಾಲ್ಲೂಕು ನೇರಳಕೆರೆಯ ಹತ್ತಿರ ವೀರಾಪುರದ ಏಳುಮಂದಕ್ಕ ದೇವಿ.
೩) ಸಿರಾ ತಾಲ್ಲೂಕು ಚಿಗದಾಸರಹಳ್ಳಿಯ ಬೇಟೆರಾಯಸ್ವಾಮಿ.
೪) ಸಿರಾ ತಾಲ್ಲೂಕು ಚಿನ್ನಪ್ಪನಹಳ್ಳಿ ಲಕ್ಷ್ಮೀ ದೇವತೆ‌.
೫) ಸಿರಾ ತಾಲ್ಲೂಕು ಮುಷ್ಟಿಗರಹಳ್ಳಿಯ ಲಕ್ಷ್ಮೀ ನರಸಿಂಹಸ್ವಾಮಿ.

ನಾದೂರು ಗುಡಿಕಟ್ಟಿಗೆ ಸೇರಿದ ಬಂಡಿಗಳು.
೧) ಸಿರಾ ತಾಲ್ಲೂಕು ಕೆರೆಯಾಗಲಹಳ್ಳಿ ಬಂಡಿ, ಬಂಡಿಕಾರರು ಎ.ರಾಮಕೃಷ್ಣಪ್ಪ.
೨) ಸಿರಾ ತಾಲ್ಲೂಕು ಬುಕ್ಕಾಪಟ್ಟಣ ಬಂಡಿ.
ಬಂಡಿಕಾರರು BR ಜಗದೀಶ್.
೩) ಮಧುಗಿರಿ ತಾಲ್ಲೂಕು ನೇರಳಹಳ್ಳಿ ಬಂಡಿ.
ಬಂಡಿಕಾರರು ರಾಜಣ್ಣ
೪) ಮಧುಗಿರಿ ತಾಲ್ಲೂಕು ವೀರಾಪುರದ ಬಂಡಿ.
ಬಂಡಿಕಾರರು ಶ್ರೀ ಜಯರಾಮಯ್ಯ ಕಾಮಣ್ಣ.
೫)ಮಧುಗಿರಿ ತಾಲ್ಲೂಕು ವೀರಾಪುರದ ಬಂಡಿ.
ಬಂಡಿಕಾರರು ವಿ.ಜೆ.ರಮೇಶ್.
೬)ಮಡಕಸಿರಾ ತಾಲ್ಲೂಕು ಪೇಲುಬಂಡೆ ಬಂಡಿ.
ಬಂಡಿಕಾರರು ಶ್ರೀ ದೊಡ್ಡಯ್ಯ.
೭) ಮಡಕಸಿರಾ ತಾಲ್ಲೂಕು ಅಗ್ರಹಾರ ಬಂಡಿ .
ಬಂಡಿಕಾರರು ಶ್ರೀ ರಮೇಶ್.

5) ಗುಡ್ಡದ_ಬೇವಿನಹಳ್ಳಿ ಗುಡಿಕಟ್ಟಿಗೆ ಸೇರಿದ ಅಮಾವಾಸ್ಯೆ ದೇವರುಗಳು- 8)
೧) ಹೊಸದುರ್ಗ ತಾಲ್ಲೂಕು ಬೇವಿನಹಳ್ಳಿಯ ಬೇವಿನಳ್ಳಮ್ಮ

ಹೊಸದಾಗಿ ನಿರ್ಮಾಣವಾಗುತ್ತಿರುವ ದೇವಾಲಯ

೨) ಸಿರಾ ತಾಲ್ಲೂಕು ನಾರಾಯಣಪುರದ ನಾರಾಯಣಸ್ವಾಮಿ.

೩) ಚಳ್ಳಕೆರೆ ತಾಲ್ಲೂಕು ಅಲ್ಲಿಪುರ ಲಕ್ಕಮ್ಮ ದೇವಿ.
೪) ಸಿರಾ ತಾಲ್ಲೂಕು ಭೂತಕಾಟನಹಳ್ಳಿಯ ಲಕ್ಷ್ಮೀ ದೇವತೆ.
೫) ಸಿರಾ ತಾಲ್ಲೂಕು ಬಡಕನಹಳ್ಳಿ ಲಕ್ಷ್ಮೀ ದೇವತೆ.
೬)ಹಿರಿಯೂರು ತಾಲ್ಲೂಕು ಬೋರನಕುಂಟೆ ಲಕ್ಷ್ಮೀ ದೇವತೆ.
೭) ಚಳ್ಳಕೆರೆ ತಾಲ್ಲೂಕು ಹಳಗೊಂಡನಹಳ್ಳಿ ಲಕ್ಷ್ಮೀದೇವತೆ.
೮) ಸಿರಾ ತಾಲ್ಲೂಕು ಉಜ್ಜನಕುಂಟೆ ಲಕ್ಷ್ಮೀ ದೇವತೆ.

ಸಿರಾ ತಾಲ್ಲೂಕು ತಾವರೆಕೆರೆ ಬಂಡಿರಂಗನಾಥಸ್ವಾಮಿ.

ಸಿರಾ ತಾಲ್ಲೂಕು ದೊಡ್ಡನಹಳ್ಳಿ ಬೇವಿನಳ್ಳಮ್ಮ ದೇವಿ.
ಮಧುಗಿರಿ ತಾಲ್ಲೂಕು ಸ್ವಾರಚಿಕ್ಕನಹಳ್ಳಿಯ ಲಕ್ಷ್ಮೀ ದೇವತೆ‌.

ಮಧುಗಿರಿ ತಾಲ್ಲೂಕು ಚಂಬೇನಹಳ್ಳಿಯ ಬೇವಿನಳ್ಳಮ್ಮ ದೇವತೆ.
ಮಧುಗಿರಿ ತಾಲ್ಲೂಕು ಬಡವನಹಳ್ಳಿ ಲಕ್ಷ್ಮೀ ರಂಗನಾಥಸ್ವಾಮಿ.
ಚಿಕ್ಕನಾಯಕನಹಳ್ಳಿ ತಾಲೂಕು ಕಾರೇಹಳ್ಳಿ ರಂಗನಾಥಸ್ವಾಮಿ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಲಕ್ಕೇನಹಳ್ಳಿ ಲಕ್ಕಮ್ಮ ದೇವಿ.
ಹಿರಿಯೂರು ತಾಲ್ಲೂಕು ಕೂನಿಕೆರೆ ಲಕ್ಷ್ಮೀ ನರಸಿಂಹಸ್ವಾಮಿ.
ಹಿರಿಯೂರು ತಾಲ್ಲೂಕು ಓಬಳಾಪುರದ ಲಕ್ಷ್ಮೀ ದೇವರು

ಜಲದೇನವರ ಮೂಲ ಪುರುಷ ಶ್ರೀ ಶ್ರೀ ಶ್ರೀ ಜಲಧಿ ಬೊಪ್ಪರಾಯಸ್ವಾಮಿ ಗುರುವಾದ ಶ್ರೀ ಶ್ರೀಶ್ರೀ ಗುರು ಬೀರಲಿಂಗೇಶ್ವರ ಸ್ವಾಮಿ ಯ ಜಾತ್ರಾ ಮಹೋತ್ಸವದ ಫೋಟೋಗಳು

ಕೃಪೆ: ಪಾಶುಪತ ಹಾಲುಮತ

No comments:

Post a Comment

ಕಂಬಳಿ ಹುಟ್ಟಿದ ಪ್ರಸಂಗ

ಕಂಬಳಿ ಹುಟ್ಟಿದ ಪ್ರಸಂಗ ☜☆☞☜☆☞☜☆☞☜☆☞ ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ಸ್ವಾಮಿ ನಮ್ಮಯ ಗುರುವು ಬಂದಾನ ಬನ್ನಿರೇ  ಸ್ವಾಮಿ ನಮ್ಮಯ ರೇವಣನು ಬಂದಾನ ...