Wednesday, 15 January 2020

ಶ್ರೀಬೀರೇಶ್ವರ ಚರಿತ್ರೆ

#ಶ್ರೀ_ಬೀರೇಶ್ವರ_ಚರಿತ್ರೆ
(ವೀರಭದ್ರ ಚರಿತ್ರೆ) 

(ಪ್ರಮಾಣ ಸ್ಕಂದ ಪುರಾಣ ಅಗಸ್ತ್ಯ ಸಂಹಿತೆಯ ೬೬ನೇ ಅಧ್ಯಾಯ ೧೦ನೇ ಶ್ಲೋಕ)

                                || ಶ್ಲೋಕ||

ಪುರ ಕೈಲಾಸ ಶಿಖರೇ| ದೈತ್ಯೋಭೂತ್ಕೂರ ರಾಕ್ಷಸಃ|
ಪಾರ್ವತೀಂಚ ತಪಸ್ತಪ್ತ್ವ| ವದಂತೀ ಭೇತಿ ದಾರುಣಂ|
ತೇನ ಮತ್ತೋವಜಗತ್ಸರ್ವ| ಬಾಧಯಾ ಮಾಸ ರಾಕ್ಷಸಃ|
ತದ್ಬಾಧಾ ಶರ್ಮನಾರ್ಥಂ ವೈ | ವೀರಭದ್ರೊವ ಶಿವಾಕೃತಿಃ|
ವೀರೇಶ್ವರ ಯತಿ ಖ್ಯಾತಃ| ಕೌರಭೋ ಭೂತ್ಮ ಹಾಶಯಃ|
ತಮೇವ ದೇವತಾಂ ಕೃತ್ವಾ| ಕೌರಬಾ ಭಕ್ತಿ ತತ್ವರಾಃ|
ಅರ್ಚಯಂತಿ ಮಹಾತ್ಮಾನಂ| ಬೀರೇಶ್ವರವಮಹಾತ್ಮನಂ||

#ಭಿಲ್ಲಾಸುರನನ_ಜನನ

 ವಿಭಾಗ ಗೋತ್ರದಲ್ಲಿ ಮಂದಾರನೆಂಬ ಮಹಾಮಹಿಮನಿಂದ ಕೈಲಾಸ ಶಿಖರದಲ್ಲಿ ಭಿಲ್ಲಾಸುರ ದೈತ್ಯನು ಹುಟ್ಟಿದನು. ಇವನು ಬಲ್ಲಿದನಾಗಿ ತ್ರಿಜಗವನ್ನ ತಾನೇ ಆಳಬೇಕೆಂಬ ಮಹತ್ವಾಕಾಂಕ್ಷೆಯಿಂದ ಗಿರಿಜಾದೇವಿಯನ್ನು ಕುರಿತು ಅನ್ನ ನೀರುಗಳಿಲ್ಲದೆ ಏಕನಿಷ್ಠೆಯಿಂದ ತಪಸ್ಸು ಮಾಡಿದನು.ಆಗ ಪಾರ್ವತಾದೇವಿ ಅವನ ತಪಸ್ಸಿಗೆ ಮೆಚ್ಚಿಬೇನು ವರವ ಬೇಡುತ್ತೀ ಬೇಡು ಎಂದು ಅನ್ನಲು  ಆಗ ಅಸುರನು ದೇವೀವಂಗೆ ಸುರರು,ನರರು,ರಾಕ್ಷಸರು,ಇವರುಗಳಿಂದ ಮರಣವಾಗಬಾರದು ಎಂದೂ ಪರಮೇಶ್ವರನ ಪ್ರತಿಬಿಂಬದಿಂದಲೇ ನನಗೆಚಮರಣವಾಗಬೇಕು ಎಂದೂ ಬೇಡಿಕೊಂಡನು.ಅದಕ್ಕೆ ಆದೇವಿಯು ಹಾಗೇ ಆಗಲೆಂದು ವರವನ್ನು  ಕೊಟ್ಟು ಮಾಯವಾದಳು.

 #ಭಿಲ್ಲಾಸುರ_ರಾಕ್ಷಸನ_ದಿಗ್ವಿಜಯ

ದೇವಿಯ ವರದಿಂದ ಮದೋನ್ಮತ್ತನಾಗಿ ಅಟ್ಟಹಾಸದಿಂದ ಭಿಲ್ಲಾಸುರನು ಅಲೆದಾಡುತ್ತಾ ತನಗೆ ಸರಿಯಾದ ವೀರರು ಯಾರು ಇರುವರೆಂದು ಹುಡುಕಹತ್ತಿದನು. 
ಆದರೆ ಅವನಿಗೆ ಅಂಥ ವೀರರು ಒಬ್ಬರು ಸಿಗದಾದರು. ಆಗ ಸೂರ್ಯ,ಚಂದ್ರ,ವಾಯು,ವರುಣ,ಕುಬೇರ,ಕಾಲ,ಯಮ,ದಿಕ್ಪಾಲಕರು ಮೊದಲಾದ ಯಾವತ್ತು ಅಧಿಕಾರಿಗಳನ್ನು ಕಿತ್ತೊಗೆದು ದೇವ,ಯಕ್ಷ,ಗಂಧರ್ವ,ನರ,ಕಿನ್ನರ ಮೊದಲಾದವರನ್ನು ತನ್ನ ಬಾಹು‌ಬಲದಿಂದ ಗೆದ್ದು ಅಮರನಾಗಿ ಮೆರೆಯುತಿದ್ದನು. ಉಳಿದ ರಾಕ್ಷಸರು ಧರ್ಮವು ನಿರ್ಮೂಲವಾಗುವಂತೆ ವೇದೋಕ್ತ ವ್ಯವಹಾರಗಳನ್ನು ಕೆಡಿಸುತ್ತಾ ಸಾಗಿದರು . ಆಕಳುಗಳು ಬ್ರಾಹ್ಮಣರು ಇರುವಂಥ ಊರುಗಳನ್ನು ಪಟ್ಟಣಗಳನ್ನು ಹಾಳು ಮಾಡತಿದ್ದರು.
ಸದಾಚಾರಕ್ಕೆ ಎಲ್ಲಿಯೂ ಆಸ್ಪದವು ದೊರೆಯದಾಯಿತು. ದೇವತೆಗಳು ,ಬ್ರಾಹ್ಮಣರು,ಗುರುಗಳು ಇವರನ್ನು ಯಾರೂ ಮನ್ನಿಸದಾದರು. ಹರಿ-ಹರ ಭಕ್ತಿ,ಯಜ್ಞ, ಜಪ, ದಾನ ಇವು ಎಲ್ಲಿಯೂ ಉಳುಲಿಲ್ಲ. ವೇದಗಳು, ಪುರಾಣಗಳು ಕನಸಿನಲ್ಲಿಯೂ ಕಿವಿಗೆ ಬೀಳದಾದವು. ಜಗತ್ತಿನ ತುಂಬ ಭ್ರಷ್ಠಾಚಾರವಾಗಿ ಧರ್ಮದ ಹೆಸರು ಉಳಿಯದಂತಾಯಿತು.
ದುಷ್ಟ ರಾಕ್ಷಸರ ಭಯಂಕರ ಅನೀತಿಯ ಕೃತಿಗಳನ್ನು ವರ್ಣಿಸುವುದು ಶಕ್ಯವಿಲ್ಲ. ಹಿಂಸೆಯು ಅತ್ಯಂತ ಪ್ರಿಯವಾಗಿದ್ದರಿಂದ ಪಾಪ ಕೃತ್ಯಗಳಿಗೆ ಮಿತಿ ಉಳಿಯಲಿಲ್ಲ.
ಈ ಪ್ರಕಾರ ಭಿಲ್ಲಾಸುರನು ಸುರಲೋಕದಲ್ಲಿ ದಾಳಿ ಇಡಲು ಅವನ ಶೌರ್ಯಕ್ಕೆ ಯಾರೂ ನಿಲ್ಲದೆ, ಯಾವತ್ತೂ ದೇವತೆಗಳು ಇಂದ್ರ,ಅಗ್ನಿ,ಯಮ,ಹರಿ,ಬ್ರಹ್ಮಾದಿಗಳು ಹೆದರಿ ಶ್ರೀ ಶಂಕರನಿಗೆ ಮೊರೆ ಇಡಲು ಬೇಡಿಕೊಂಡರು

#ವೀರೇಶ್ವರನ_ಜನನ

ಶ್ರೀ ಶಂಕರನು ಎಲ್ಲಾ ಸಂಗತಿ ವಿಚಾರಿಸಿ ಕೋಪಾರೂಡನಾಗಿ ವೀರಭದ್ರನ ಮುಖವ ನೋಡಿದನು. ಶಿವನ ಕೋಪ ತೇಜಾಂಶವು ವೀರೇಶನ ರೂಪಾಗಿ ಈಶನ  ಮುಂದೆ ನಿಂತನು ಆವೇಶದಿಂದ ವೀರೇಶನಿಗೆ ಭಿಲ್ಲಾಸುರ ರಾಕ್ಷಸನನ್ನು ಕೊಂದು ಬೀರೇಶ್ವರನಾಗೆಂದು ವರವಿತ್ತನು‌ ಆಗ ವೀರೇಶನು ತನ್ನ ಸತಿಯಾದ ಭದ್ರಕಾಳಿಗೆ ನೀನು ಕವಳೇಶ್ವರಿ ಎಂಬ ನಾಮವನ್ನು ಧರಿಸಿಕೊಂಡು ನನ್ನ ಸಂಗಡ ಬರಬೇಕೆಂದು ಆಜ್ಞೆ ಮಾಡಿದನು. ಆಗ ಭದ್ರಕಾಳಿಯು ಪತಿಯಾಜ್ಞೆಯಂತೆ ಕವಳೇಶ್ವರಿ ಎಂಬ ನಾಮವನ್ನು ಧರಿಸಿದಳು. ಆಗ ವೀರೇಶ್ವ ಕವಳೇಶ್ವರಿಯವರು ಕೊಪಾರೂಡರಾಗಿ ಭಿಲ್ಲಾಸುರ ರಾಕ್ಷಸನನ್ಬು ಸಂಹಾರ ಮಾಡಲಿಕ್ಕೆ ಹೊರಟರು......,...,

ನವೀನ್ ಆರ್ಯ ಕ್ಷತ್ರಿಯ

No comments:

Post a Comment

ಕಂಬಳಿ ಹುಟ್ಟಿದ ಪ್ರಸಂಗ

ಕಂಬಳಿ ಹುಟ್ಟಿದ ಪ್ರಸಂಗ ☜☆☞☜☆☞☜☆☞☜☆☞ ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ಸ್ವಾಮಿ ನಮ್ಮಯ ಗುರುವು ಬಂದಾನ ಬನ್ನಿರೇ  ಸ್ವಾಮಿ ನಮ್ಮಯ ರೇವಣನು ಬಂದಾನ ...