Thursday, 4 June 2020

ಆಲ್ ಇಂಡಿಯಾ ಶಫರ್ಡ್ ವೆಲ್ಫೇರ್ ಸೊಸೈಟಿಯ ಕಾರ್ಯಕ್ರಮಗಳು


ಆಲ್ ಇಂಡಿಯಾ ಶಫರ್ಡ್ ವೆಲ್ಫೇರ್ ಸೊಸೈಟಿಯ ಕಾರ್ಯಕ್ರಮಗಳು
1. ಹಾಲುಮತ ಜಗದ್ಗುರು ಶ್ರೀರೇವಣ್ಣಸಿದ್ದೇಶ್ವರ  ದೇವಾಲಯ ಸ್ಥಾಪನೆ ಹಾಗೂ ಪ್ರತಿ ತಾಲೂಕು ಮತ್ತು ಜಿಲ್ಲೆಯಲ್ಲಿ ಬೀರೇಶ್ವರ ದೇವಾಲಯವನ್ನು ಸ್ಥಾಪಿಸುವುದು
 
2. ಹಾಲುಮತ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಧ್ಯಾನ ಕೇಂದ್ರ ಸ್ಥಾಪನೆ

3. ಹಾಲುಮತ ಪುಣ್ಯಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ  ವಿಶೇಷ ಅನುದಾನ ಬಿಡುಗಡೆಗಾಗಿ ಒತ್ತಾಯ 

5. ಕನಕ ಗುರುಪೀಠಿಕೆ ರೇವಣ್ಣಸಿದ್ದೇಶ್ವರ  ದೇವಸ್ಥಾನ, ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನ ಮತ್ತು ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನವನ್ನೂ ನಿರ್ವಹಣೆಗೆ ಹಸ್ತಾಂತರಿಸುವುದು.

6. ಕಾಶಿಯಲ್ಲಿ ಅಹಲ್ಯಾದೇವಿ ಹೊಲ್ಕರ್ ಅವರ ಸಂಸ್ಮರಣ ಪೀಠ ಸ್ಥಾಪಿಸುವುದು.

7. ನಮ್ಮ ಕುಲದಲ್ಲಿ ಜನಿಸಿದ ಸರ್ವಶ್ರೇಷ್ಠ ಯೋಗಿಗಳು, ಸಂತರು ಮತ್ತು  ಮಹಾಸಾಧ್ವಿಯರ  ಸ್ಮರಣೆ ಸಮಾಜ ಬಂಧುಗಳಲ್ಲಿ ದಿನನಿತ್ಯ ಸಾಗಬೇಕು, ಹಾಗೂ ಕಡ್ಡಾಯವಾಗಿ ನಮ್ಮ ದೇವರಕೋಣೆಯಲ್ಲಿ  ದಿನನಿತ್ಯ ಪೂಜಿಸಬೇಕು, ಇದು ನಮ್ಮ ಕುಲ ಶ್ರೇಷ್ಠರನ್ನು ಸ್ಮರಿಸುವ ಪರಿ ಆಗಿದೆ ವರ್ಷಕ್ಕೆ ಒಮ್ಮೆ ಆದರು ಅವರ ಪುಣ್ಯ ಸ್ಥಳಗಳನ್ನು ಸಂದರ್ಶಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು, ಜೈ ಹಾಲುಮತ

8. ಮಲೆಮಾದೇಶ್ವರ ಬೆಟ್ಟದಲ್ಲಿ, ಧರ್ಮರತ್ನಾಕರ ಮಾದೇಶ್ವರ ದೇವಾಲಯ ನಿರ್ಮಾತೃ ಶ್ರೀಜುಂಜೆಗೌಡರ ದೇವಸ್ಥಾನ ಮತ್ತು ಸ್ಮಾರಕ ಭವನ ನಿರ್ಮಾಣ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವುದು ಹಾಗೂ ಮಾದೇಶ್ವರ ಬೆಟ್ಟದಲ್ಲಿ ಕನಕ ಗುರುಪೀಠದ ಶಾಖಾ ಮಠವನ್ನು ಸ್ಥಾಪನೆ ಮಾಡುವುದು

9. ಹಾಲುಮತ ಸಮಾಜದ ಮಹಾಸಾಧ್ವಿ, ಶಿವಶರಣೆ, ಮಾದೇಶ್ವರ ಸ್ವಾಮಿಯ ಪ್ರಿಯ ಭಕ್ತೆಯಾದ ಮಹಾಮಾತೆ ಸಂಕವ್ವನ ಗುಡಿಯನ್ನು ಮಾದೇಶ್ವರ  ಬೆಟ್ಟದಲ್ಲಿ ನಿರ್ಮಾಣ ಮಾಡಬೇಕು

10. ಸಮಾಜದ ಸಂಘಟನೆ ದೃಷ್ಟಿಯಿಂದ ಕನಕ ಸ್ಪೋರ್ಟ್ಸ್ ಕ್ಲಬ್ ಸ್ಥಾಪನೆಯ ಯೋಜನೆಯನ್ನು ಕೊಡ ಹೊಂದಲಾಗಿದೆ

11. ಸಮಾಜದ ಬಂಧುಗಳ ಆರ್ಥಿಕ ಸ್ವಾವಲಂಬನೆಗಾಗಿ ಹಾಲುಮತ ಸಹಕಾರ ಸಂಘ ಸ್ಥಾಪನೆಯ ಉದ್ದೇಶಿತ ಯೋಜನೆ ಕೂಡ ಇದೆ

12. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಿಗೆ ನಡೆಯುವ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿತ ವಿಷಯಗಳಲ್ಲಿ ತರಬೇತಿ ನೀಡುವ ಕೇಂದ್ರವನ್ನು ತೆರೆಯುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ

13. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳ ಕುರಿತಾದ ತರಬೇತಿ ಕೇಂದ್ರವನ್ನು ತೆರೆಯುವ ಗುರಿಯನ್ನು ಹೊಂದಲಾಗಿದೆ

14. ನಮ್ಮ ಸಮಾಜದ ಪದವೀಧರ ಯುವಕ-ಯುವತಿಯರಿಗೆ ವಿದೇಶದಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಹೋಗಬಯಸುವ  ಹಾಗೂ ಉದ್ಯೋಗ ಬಯಸುವ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ  ನೀಡುವ ಕೇಂದ್ರ ತೆರೆಯುವ ಗುರಿಯನ್ನು ಹೊಂದಲಾಗಿದೆ

15. ಹಾಲುಮತ ಸಮಾಜದಲ್ಲಿ ಜನಿಸಿದ ಶ್ರೇಷ್ಠ ಯೋಗಿಗಳು, ಸಂತರು ಮತ್ತು ಮಹಾಸಾಧ್ವಿಗಳ ಕರ್ಮಭೂಮಿಗಳನ್ನು ಪುಣ್ಯಕ್ಷೇತ್ರಗಳಾಗಿ  ಅಭಿವೃದ್ಧಿಪಡಿಸುವ ಕಾರ್ಯಯೋಜನೆಯನ್ನು ಹೊಂದಲಾಗಿದೆ

16. ನಂದಗಡದಲ್ಲಿ ಇರುವ ಸಂಗೊಳ್ಳಿ ರಾಯಣ್ಣನವರ ಸಮಾಧಿ ಹಾಗೂ ಹುತಾತ್ಮರಾದ ಸ್ಥಳವನ್ನು ದೊಡ್ಡ ಕ್ರಿಯಾಯೋಜನೆಯೊಂದಿಗೆ ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಮನವಿ ಮತ್ತು ನಿರಂತರವಾಗಿ ಒತ್ತಡ ಹಾಕುವುದು


No comments:

Post a Comment

ಕಂಬಳಿ ಹುಟ್ಟಿದ ಪ್ರಸಂಗ

ಕಂಬಳಿ ಹುಟ್ಟಿದ ಪ್ರಸಂಗ ☜☆☞☜☆☞☜☆☞☜☆☞ ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ಸ್ವಾಮಿ ನಮ್ಮಯ ಗುರುವು ಬಂದಾನ ಬನ್ನಿರೇ  ಸ್ವಾಮಿ ನಮ್ಮಯ ರೇವಣನು ಬಂದಾನ ...