ಕ್ರೈಸ್ತ ಪೂರ್ವ ದಲ್ಲಿ ಅಂದರೆ ಸುಮಾರು 5000 ವರ್ಷ ಹಿಂದಿನ #ಸಿಂಧೂ_ನಾಗರೀಕತೆಯಲ್ಲಿ_ಕುರುಬರ_ಹೆಜ್ಜೆ ಗುರುತುಗಳು.
ಕುರುಬರ ಇತಿಹಾಸ
ಕುರುಬ ಜನಾಂಗ ಪುರಾತನವಾದ ಜನಾಂಗ.ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿಯೂ ಸಹ ಕುರು ವಂಶ ಮತ್ತು ಯದುವಂಶಗಳ ಪ್ರಸ್ಥ್ತಾವನೆಯಾಗಿದೆ. ಭಾರತ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದ ಚಂದ್ರಗುಪ್ತನು ಕುರಿಗಾಹಿಯಾಗಿದ್ದನು. ಮೌರ್ಯರ ಮೊದಲ ದೊರೆ ಚಂದ್ರಗುಪ್ತನು ಆಗಿನ ನಂದ ದೊರೆಗಳ ವಿರುದ್ದ ಸಿಡಿದ್ದೆದ್ದು ತನ್ನದೇ ಸಾಮ್ರಾಜ್ಯವನ್ನು ಚಾಣಾಕ್ಯನ ಸಹಾಯದಿಂದ ಕಟ್ಟಿದನು. ಇದರ ಗುರುತಾಗಿ ಭಾರತ ಸರ್ಕಾರವು ನವ ದೆಹಲಿಯ ಪಾರ್ಲಿಮೆಂಟ್ ಕಟ್ಟಡದ 5ನೇ ಮಹಾದ್ವಾರದ ಬಳಿ ಚಂದ್ರಗುಪ್ತನ ಪುತ್ಥಳಿಯನ್ನು ಸ್ಥಾಪನೆ ಮಾಡಿ ಅದರ ಕೆಳಗೆ ಕುರಿ ಕಾಯುವ ಹುಡುಗ ತಾನು ಕಟ್ಟಲಿರುವ ಸಾಮ್ರಾಜ್ಯದ ಬಗ್ಗೆ ಕನಸು ಕಾಣುತ್ತಿರುವುದು ಎಂದು ಬರೆಯಲಾಗಿದೆ.
ವಿಜಯನಗರ ಸಾಮ್ರಾಜ್ಯದ ಹಕ್ಕ-ಬುಕ್ಕರಾಯರು ಕುರುಬಜನಾಂಗದವರು, ಮೊದಲಿಗೆ ಹಕ್ಕರಾಯರು ವಾರಂಗಲ್ ರಾಜರ ಸೇನಾದಿಪತಿಯಾಗಿದ್ದು ಮಲ್ಲಿಕಾಪ್‍ರ್‍ನು ವಾರಂಗಲ್ ಮೇಲೆದಂಡೆತ್ತಿ(ಯುದ್ದಕ್ಕೆ) ಬಂದಾಗ ಯುದ್ದದಲ್ಲಿ ಸೋತು ಸೆರೆಯಾಳಾಗಿ (ರಾಜಾಧಾನಿ ದೆಹಲಿ) ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರೆ ಪ್ರಾಣ ಭಿಕ್ಷೆ ದೊರೆಯುತ್ತದೆ ಎಂಬ ಬೆದರಿಕೆÀಗೆ ಮಣಿಯದೆ ಮಲ್ಲಿಕಾಪ್‍ರ್‍ನ ಸಾಮ್ರಾಜ್ಯದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡು ಮರುಗಿದ ಹಕ್ಕರಾಯರು ದೆಹಲಿಯಿಂದ ತಪ್ಪ್ಪಿಸಿಕೊಂಡು ಬಂದು ತಮ್ಮ ಅಳಿದುಳಿದ ಸೈನ್ಯವನ್ನು ಅಪಾರ ಸಂಖ್ಯೆಯಲ್ಲಿದ್ದ ಕುರುಬಜನಾಂಗವನ್ನು ಒಟ್ಟುಗೂಡಿಸಿ ವಿದ್ಯಾರಣ್ಯರೆಂಬ ಸಾದು ಮಹಾತ್ಮರ ಮಾರ್ಗದರ್ಶನದಂತೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿದರು.ಈ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ಕರ್ನಾಟಕÀದ ಇತಿಹಾಸದಲ್ಲಿ ಸ್ವರ್ಣಯುಗವೆಂದೆ ಕರೆಯಲಾಗಿದೆ.ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕುರುಬಜನಾಂಗದವರು ಕಡೆÀಗಣಿಸಲ್ಪಟ್ಟರು ಆಲ್ಲದೆ ತುಂಬಾ ಹಿಂದುಳಿದರು, ಹೊಸ ರಾಜಕೀಯ ಬೆಳವಣಿಗೆಗಳು ಅವರ ಅರಿವಿಗೆ ಬರುವುದು ನಿಧಾನವಾಯಿತು, ತದ ನಂತರ ಬ್ರಿಟಿಷರ ವಿರುದ್ದ ಹೋರಾಡಿದ ಹೋಳ್ಕರ್ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣನಂತಹದೇಶಪ್ರೇಮಿಗಳ ಹೋರಾಟ ಜನರನ್ನು ಸಂಘಟಿಸುವ ಶಕ್ತಿ ಮತ್ತು ಯುಕ್ತಿ ಯನ್ನು ಕಂಡ ಬ್ರಿಟಿಷ್ ಸರ್ಕಾರ ಕುರುಬರನ್ನು ರಾಜ್ಯಾಡಳಿತದಿಂದ ದೂರವಿಟ್ಟಿತು. ಉತ್ತರ ಕರ್ನಾಟಕದ ಮುಸಲ್ಮಾನ್ ದೊರೆಗಳು ತಮ್ಮ ವಿಜಯನಗರ ಸಾಮ್ರಾಜ್ಯದ ಮೇಲಿನ ದ್ವೇಷದಿಂದ ಕುರುಬರನ್ನು ಹಿಂಸಿಸಲು ಪ್ರಾರಂಭಿಸಿದರು ಇದರ ಪರಿಣಾಮ ನೂರರು ವರ್ಷಗಳಿಂದ ನೆಲೆಸಿದ ನಾಡನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಇದಕ್ಕಿಂತ ಹೆಚ್ಚಾಗಿ ತಮ್ಮ ಪ್ರಾಮಾಣಿಕತೆ ಪರಾಕ್ರಮ ಆಡಳಿತ ನೈಪುಣ್ಯತೆಗಳಿಂದ ಇತಿಹಾಸದಲ್ಲಿ ದೊಡ್ಡ ದೊಡ್ಡ ರಾಜ್ಯಗಳನ್ನೇ ಸ್ಥಾಪಿಸಿ ಮೆರೆದ ಈ ನಮ್ಮ ಜನಾಂಗದ ರಾಜರು, ಚಕ್ರವರ್ತಿಗಳು ಸಹ ತಮ್ಮ ಕೀರ್ತಿ ವೈಭವಗಳ ಪ್ರಚಾರ ಪ್ರಸಿದ್ದಿಗಳಿಗಾಗಿ ಮೇಲು ವರ್ಗದ ಜನರಿಗೆ ತಮ್ಮ ಆಸ್ಥಾನದಲ್ಲಿ ಮಹತ್ತರವಾದ ಸ್ಥಾನಮಾನಗಳನ್ನು ನೀಡಿ ಗೌರವಿಸಿದರೇ ವಿನಃ ತಮ್ಮ ಸಮೂದಾಯದ ಅಭಿವೃದ್ದಿಗಾಗಿ,ವಿಕಾಸಕ್ಕಾಗಿ ಯಾವುದೇ ಮುಖ್ಯ ಯೋಜನೆಗಳನ್ನು ರೂಪಿಸಲಿಲ್ಲ. ತಾವು ದೈವಸಂಜಾತರೆಂದು,ವೀರಪುತ್ರರೆಂದು,ದಾನಚಿಂತಾಮಣಿಗಳೆಂದು ಹೆಸರುಗಳಿಸುವ ನಿರಂತರ ಪ್ರಯತ್ನದಲ್ಲಿಯೇ ಅವರ ಆಯುಷ್ಯ ಮುಗಿದು ಹೋಯಿತು.ಅವರ ಆಸ್ಥಾನಗಳಲ್ಲಿದ್ದ ವಿದ್ವಾಂಸರು ಆ ರಾಜರ, ಚಕ್ರವರ್ತಿಗಳ ಮೂಲವನ್ನು,ವೈಷಮ್ಯವನ್ನು,ವೈವಿಧ್ಯತೆಯನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಜನಾಂಗದ ಜ್ಞಾನ, ಸಮಾಜ ವಿಜ್ಞಾನಗಳ ದೃಷ್ಠಿಯಿಂದಲಾದರೂ ಅದರೆಡೆಗೆ ಗಮನಹರಿಸದೆ ಈ ಜನಾಂಗದ ಪುರಾಣ,ಇತಿಹಾಸ, ಜ್ಞಾನ,ವಿಜ್ಞಾನಗಳಲ್ಲಿಯೂ ಅರಿವಿಗೆಬಾರದಂತೆ ಮರೆವಿನ ಅವಜ್ಞೆಯ ಅನಾದರದ ಕಮರಿಗಳಲ್ಲಿ ಹೂತು ಹೋದರು.
ಕರುಬ ಜನಾಂಗದವರು ತಮ್ಮ ಸಂಸ್ಕøತಿ ಹಾಗೂ ಸಂಪ್ರದಾಯಗಳಿಗೆ ಪರಕೀಯರಿಂದ ದಕ್ಕೆಯಾದಾಗ ತಮ್ಮ ಕುಲ,ಗೋತ್ರ, ಮತ, ಬಿಟ್ಟುಕೊಡದೆ ತಾವು ನೂರಾರು ವರ್ಷಗಳಿಂದ ನೆಲೆಸಿದ್ದ ನಾಡನ್ನು ತೊರೆದು ಬಂದವರು ಇಂತಹ ಸ್ವಾಭಿಮಾನಿ “ಕುರುಬ” ಜನಾಂಗವು ಇಂದು ಭಾರತದ ಹಲವಾರು ಕಡೆ ಹರಿದು ಹಂಚಿಹೋಗಿದೆ. ಹೀಗೆ ಹರಿದು ಹಂಚಿ ಹೋದ ತಮ್ಮ ಜನಾಂಗದ “ ಕುರುಬ ” ಎಂಬ ಹೆಸರು, ಆಯಾ ಪ್ರದೇಶಗಳ ಭಾಷೆಗೆ ತಕ್ಕಂತೆ ಬದಲಾಗುತ್ತಾ ಹೋಗಿದೆ. ಹಾಗೂ ಕಾಲಕ್ಕನುಗುಣವಾಗಿ ಬಂದ ಬೇರೇ ಬೇರೇ ಧರ್ಮಗಳ ಪ್ರಭಾವ ಹಾಗೂ ವಿವಿಧ ವಿದ್ಯಮಾನಗಳಿಗೆ ಅನುಗುಣವಾಗಿ “ ಕುರುಬ ” ಪದದ ಜೊತೆಗೆ ಇತರ ಪದಗಳು ಸೇರಿಕೊಂಡಿವೆ.
ಪ್ರಾಚೀನಕಾಲದಿಂದಲೂ ಕುರಿಸಾಕಾಣಿಕೆ,ಕಂಬಳಿ ತಯಾರಿಕೆಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಬಂದ ಕಾರಣದಿಂದ ಅಲೆಮಾರಿತನವನ್ನು ಮೈಗೂಡಿಸಿಕೊಂಡು, ಒಂದೆಡೆ ನೆಲೆನಿಂತು ನೆಮ್ಮದಿಯ ಸುಖ ಜೀವನಕ್ಕೆ, ಸಂಪಾದನೆಗೆ, ಆರಾಮದಾಯಕವಾದ ಜೀವನಕ್ರಮಕ್ಕೆ ಒಡ್ಡಿಕೊಳ್ಳದೆ, ಸರಳವಾದ ಮಿತ ಆಸೆ ಆಕಾಂಕ್ಷೆಗಳ ವರ್ತುಲದಲ್ಲಿ ತಮ್ಮನ್ನು ತಾವೇ ಬಂಧಿಸಿಕೊಂಡು ನಡೆಸುತ್ತಿದ್ದ ಜೀವನಕ್ರಮಕ್ಕೆ ಶಿಕ್ಷಣವೂ ಅಗತ್ಯವೆಂಬುದನ್ನು ಗಂಭೀರವಾಗಿ ಪರಿಗಣಿಸದ ಮತ್ತು ಒಂದು ವೃತ್ತಿ ಹಾಗೂ ಸಮುದಾಯಕ್ಕೆ ಸೇರಿರುವ ನಾವೆಲ್ಲರೂ ವಿಚಾರ ವಿನಿಮಯಕ್ಕಾಗಿ ಕಷ್ಟ, ಸುಖ-ದುಖಃಗಳನ್ನು ಹಂಚಿಕೊಳ್ಳುವುದಕ್ಕಾಗಿ ಒಂದೆಡೆ ಸೇರಬೇಕು ಒಂದುಗೂಡಬೇಕು ಏಂಬ ಪರಿಕಲ್ಪನೆಯೇ ಇರದಿದ್ದ ಕಾರಣದಿಂದಾಗಿ ತಮ್ಮ ತಮ್ಮ ಮೂಲಗಳನ್ನು ಹುಡುಕಿಕೊಳ್ಳುವ, ಅದರಿಂದ ಅಸ್ಮಿತ ಅಭಿಮಾನವನ್ನು ರೂಢಿಸಿಕೊಳ್ಳುವ ತಮ್ಮ ಹಿರಿಮೆ ಗರಿಮೆ ಕಲಾವಂತಿಕೆ ವೈಶಿಷ್ಟ್ಯಗಳನ್ನು ಲೋಕ್ಕಕ್ಕೆ ಪರಿಚಯಿಸುವ ಪ್ರಯತ್ನವನ್ನು ನಮ್ಮ ಪೂರ್ವಿಕರು (ಜನಾಂಗ) ಮಾಡಲಿಲ್ಲ.
ಚಾರಿತ್ರಿಕವಾಗಿ ಮತ್ತು ಸಾಂಸ್ಕøತಿಕವಾಗಿ ಕರ್ನಾಟಕದಲ್ಲಿ ಬಹುದೊಡ್ಡ ಪಾತ್ರವನ್ನು ಹೊಂದಿರುವ ಕುರುಬ ಜನಸಮುದಾಯದವರನ್ನು ಹಾಲುಮತದ ಸಂಪ್ರದಾಯದವರೆಂದು ಕರೆಯುತ್ತಾರೆ.
ಕುರುಬ ಜನಾಂಗದವರು ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಪೂಜಿಸಿಕೊಂಡು ಬಂದವರು, ಕಲ್ಲ್ಲಿನ ಶಿಲೆಯನ್ನು ಪೂಜಿಸುವುದು ಪುರಾತನವಾದ ಸಂಪ್ರದಾಯ,ಅದೇ ಸಂಸ್ಕøತಿ ಮುಂದೆ ಶಿವಲಿಂಗ ಪೂಜೆಯಾಗೆ ಮಾರ್ಪಟ್ಟಿತು. ಪ್ರಾಚೀನಕಾಲದಿಂದಲೂ ನಮ್ಮ ಜನಾಂಗದವರು ತಮ್ಮ ಮೂಲಗುರುವೆಂದು ಆರಾದಿಸಿಕೊಂಡು ಬಂದಿರುವ ಶ್ರೀಜಗದ್ಗುರು ರೇವಣಸಿದ್ದರಿಗೆ ಅಗ್ರಸ್ಥಾನವನ್ನು ನೀಡುತ್ತಾರೆ. ಕುರುಬ ಜನಾಂಗದವರಾದ ನಾವು ಶಿವನನ್ನು ಬೀರೆಶ್ವರ,ಮೈಲಾರಲಿಂಗ, ಮಾದೇಶ್ವರ,ಮಲ್ಲಪ್ಪ, ಮಲ್ಲಿಕಾರ್ಜುನ, ಮುಂತಾದ ಹೆಸರಿನಲ್ಲಿ ಪೂಜಿಸುತ್ತೆವೆ.ಎಲ್ಲಮ್ಮ, ಭೀಮವ್ವ, ಚೌಡಮ್ಮ ಮುಂತಾದ ಹೆಸರಿನಲ್ಲಿ ಶಕ್ತಿದೇವಿಯನ್ನು ಪೂಜಿಸುತ್ತೇವೆ. ಕರ್ನಾಟಕ ಮತ್ತು ಆಂದ್ರಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಬೀರೇಶ್ವರ ಅಥವಾ ಮೈಲಾರಲಿಂಗೇಶ್ವರ ದೇವಾಲಯಗಳಿರುತ್ತದೆ ಹಾಗೂ ಈ ದೇವಾಲಯದ ಪೂಜಾರಿಗಳು (ಅರ್ಚಕರು)ಕುರುಬ ಜನಾಂಗದವರೇ ಆಗಿರುತ್ತಾರೆ.
ಕುರುಬ ಸಮುದಾಯದಲ್ಲಿ ಸಿಗುವ ಎರಡು ಪ್ರಧಾನ ಸಂಪ್ರದಾಯವೆಂದರೆ, ಒಂದು ಹತ್ತಿಕಂಕಣ ಮತ್ತೊಂದು ಉಣ್ಣೆ ಕಂಕಣ ಯಾವುದೇ ಕ್ರಮಬದ್ದ ಹಾಗೂ ಸಮಾಜಕ್ಕೆ ಉಪಯುಕ್ತವಾಗುವ ಅಲ್ಲದೆ ಮಾನವನಿಗೆ ಮಂಗಳಕರವೆನಿಸುವ ಸಂದರ್ಭದಲ್ಲಿ ನಾವು ಇಚ್ಛಾಶಕ್ತಿಯನ್ನು ತೊಡುತ್ತೇವೆ. ಆ ಇಚ್ಛಾಶಕ್ತಿಯು ಕಂಕಣಬದ್ದವಾಗಿರಬೇಕೆಂದು ಆಶಿಸುತ್ತೇವೆ, ಅದಕ್ಕೆ ಸಾಂಕೇತಿಕವಾಗಿ ಅನಾದಿ ಕಾಲದಿಂದಲೂ ನಮ್ಮ ಸಮುದಾಯದವರು ಕಂಕಣವನ್ನು ಕಟ್ಟುವ ಪದ್ದತಿಯನ್ನು ರೂಡಿಸಿಕೊಂಡಿದ್ದಾರೆ.
ನಾವು ನಮ್ಮ ಸಂಸ್ಕøತಿಯ ಮೂಲ ಸೊಗಡನ್ನು,ಪರಂಪರಾಗತ ಜೀವನ ಪದ್ದತಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಬಂದಿದ್ದೇವೆ. ಅದೇ ರೀತಿಯಲ್ಲಿ ಮುಂದುವರೆಸುತ್ತಾ ಸಮಸ್ತ ಕುಲಭಾಂದವರೆಲ್ಲರು ಒಂದುಗೂಡಿ ಕರ್ನಾಟಕÀದ ಇತಿಹಾಸದಲ್ಲಿ ಸ್ವರ್ಣಯುಗವೆಂದೆ ಕರೆಯಲಾದ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ಮತ್ತೆ ಮರುಕಳಿಸುವತ್ತ ದಿಟ್ಟಹೆಜ್ಜೆಯನ್ನು ಹಾಕೋಣ.
ಕುರುಬರ ಇತಿಹಾಸ ಪರಂಪರೆ, ಭಾಗ 30
ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ
ಸಾಮ್ರಾಟ ಹುಕ್ಕಬುಕ್ಕ ಅಧ್ಯಯನ ಕೇಂದ್ರ, ಶಿವಮೊಗ್ಗ
ಮಗಧ ಮತ್ತು ಮೌರ್ಯಸಾಮ್ರಾಜ್ಯ
ಕ್ರಿ.ಪೂ. ೬ನೆಯ ಹಾಗೂಆನಂತರದ ಒಂದೆರಡು ಶತಮಾನಗಳಲ್ಲಿಉತ್ತರ ಭಾರತದಲ್ಲಿ ಹಲವಾರುರಾಜ್ಯಗಳೂ, ಗಣರಾಜ್ಯಗಳೂಅಸ್ತಿತ್ವದಲ್ಲಿದ್ದವು. ಭೌದ್ಧ ಸಾಹಿತ್ಯದಲ್ಲಿಹದಿನಾರು ಜನಪದ(ಸೋಲಹಮಹಾರಾಜನ್ ಪದ)ಗಳ ಉಲ್ಲೇಖವಿದೆ.ಪುರಾಣಗಳಲ್ಲೂ ಇವುಗಳ ವಿವರಗಳುಸಿಗುತ್ತವೆ. ಈ ಜನಪದಗಳು ಒಂದೇರೀತಿಯಾಗಿರಲಿಲ್ಲ. ಈ ಭಿನ್ನಮೂಲಗಳಲ್ಲಿ ಇವುಗಳ ಹೆಸರುಗಳನ್ನೂಕೊಡಲಾಗಿದೆ. ಕಾಂಬೋಜ, ಗಾಂಧಾರ,ಅಂಗ, ಆವಂತಿ, ಪೌರವ(ಅಥವಾಕುರು>ಕುರುಂಬ), ಶೂರಸೇನ, ಆಶ್ಮಕ,ಪಾಂಚಾಲ, ಕಾಶಿ, ಕೋಸಲ, ಮಗಧ,ಇಕ್ವಾಕು, ಮೈಥಿಲ, ಹೈಹಯ, ಕಲಿಂಗಮತ್ತು ವೀತಿಹೋತ್ರಗಳು ಪುರಾಣೋಕ್ತರಾಜ್ಯಗಳಾಗಿವೆ. ಇವೆಲ್ಲವೂ ಪಶುಪಾಲಕಮೂಲದ ಅರಸರಿಂದಆಳುತ್ತಿದ್ದವುಗಳೆಂದು ವಿದ್ವಾಂಸರುಅಭಿಪ್ರಾಯ ಪಡುತ್ತಾರೆ. ಇವರಉದ್ಯೋಗ ಹೈನುಗಾರಿಕೆ ಮತ್ತು ಕಂಬಳಿನೇಕಾರಿಕೆ ಉದ್ಯಮವಾಗಿತ್ತು.ಕಾಂಬೋಜ, ಗಾಂಧಾರ,ಪೌರವ(ಅಥವಾ ಕುರು>ಕುರುಂಬ),ಶೂರಸೇನ, ಆಶ್ಮಕ, ಪಾಂಚಾಲ,ಕೋಸಲ, ಮಗಧ, ಮೈಥಿಲ,ಹೈಹ(ನಾಗವಂಶ)ಯ ಇತ್ಯಾದಿಗಳುಪಶುಪಾಲಕರ ಉಪವೃತ್ತಿಗಳನ್ನುಸೂಚಿಸುವ ಹೆಸರುಗಳಾಗಿವೆ. ಅಂದುಕೇವಲ ಈ ಹದಿನಾರು ರಾಜ್ಯಗಳಷ್ಟೇಇದ್ದುವೆಂದು ಹೇಳಲಾಗದು. ಇವುಅಂದು ಪ್ರಬಲವಾಗಿದ್ದರಾಜ್ಯಗಳಾಗಿದ್ದವು. ಕ್ರಮೇಣ ಈರಾಜ್ಯಗಳು ತಮ್ಮತಮ್ಮಲ್ಲಿಕಾದಾಡತೊಡಗಿದ್ದರ ಪರಿಣಾಮವಾಗಿಕೆಲವು ಅಳಿದು ಇನ್ನು ಕೆಲವು ಬೆಳೆದವು.ಇವುಗಳಲ್ಲಿ ಅಂತಿಮವಾಗಿಪ್ರಾಬಲ್ಯವನ್ನು ಹೊಂದಿ ಹಿರಿದಾದರಾಜ್ಯವೆನ್ನಿಸಿಕೊಂಡಿದ್ದು ಮಗಧರಾಜ್ಯವಾಗಿದೆ.
ಮಗದ ಸಾಮ್ರಾಜ್ಯವನ್ನು ಒಟ್ಟು ನಾಲ್ಕುಸಂತತಿಗಳು ಆಳಿದ್ದು ಮೊದಲ ಮೂರುಸಂತತಿಗಳ ಆಡಳಿತದಲ್ಲಿ ಅದನ್ನು‘ಮೊದಲ ಮಗಧ ಸಾಮ್ರಾಜ್ಯವೆಂದುಇತಿಹಾಸದಲ್ಲಿ ಕರೆಯಲಾಗಿದೆ.
ಅ. ಹರ‍್ಯಾಂಕ ಸಂತತಿ : ನಾಲ್ಕು ಜನರಾಜರ ಆಳ್ವಿಕೆ ನಂತರ
೧. ಬಿಂಬಸಾರ(ಕ್ರಿ.ಪೂ. ೫೪೪-೪೯೨)
೨. ಅಜಾತಶತೃ(ಕ್ರಿ.ಪೂ. ೪೯೨-೪೬೦)
೩. ಉದಯಿನ್ (ಕ್ರಿ.ಪೂ. ೪೬೦-೪೪೪)
ಬ. ಶಿಶುನಾಗ ಸಂತತಿ
ಕ. ನಂದ ಸಂತತಿ
೧. ಮಹಾಪದ್ಮನಂದ
- ಮಕ್ಕಳು, ಎಂಟು ಜನರು
ಡ. ಮೌರ್ಯ ಸಂತತಿ
೧. ಚಂದ್ರಗುಪ್ತ ಮೌರ್ಯ
೨. ಬಿಂಬಸಾರ
೩. ಅಶೋಕ (ಕ್ರಿ.ಪೂ. ೨೭೨-೨೩೨)
೪. ಬ್ರಹದ್ರಥ (ಕ್ರಿ.ಪೂ. ೨೩೨- ೧೯೫)
ಮಗಧವನ್ನು ಆಳಿದ ಈನಾಲ್ಕೂ ಸಂತತಿಗಳು ದಕ್ಷಿಣ ಭಾರತದಲ್ಲಿ‘ವಿಜಯನಗರ ಸಾಮ್ರಾಜ್ಯ(ಕ್ರಿ.ಶ.೧೩೩೬-೧೫೬೫)ವನ್ನು ಕಟ್ಟಿ ಆಳಿದನಾಲ್ಕೂ ರಾಜಮನೆತನಗಳನ್ನುಹೋಲುತ್ತವೆ. ಮತ್ತು ಇವುಧನಗಾರರಾದ ಕುರುಬರಸಾಧನೆಗಳಾಗಿವೆ.
ಮೌರ್ಯರು : ಕುಲಮೂಲ
ಕ್ರಿ.ಪೂ. ೫೪೫-೪೪ರಲ್ಲಿ ಆಡಳಿತಕ್ಕೆಬಂದ ಮಗಧ ಸಾಮ್ರಾಜ್ಯದ ನಾಲ್ಕನೆಯಸಂತತಿಯಾಗಿ ಮೌರ್ಯವಂಶವುಅಧಿಕಾರಕ್ಕೆ ಬರುತ್ತದೆ. ಈ ವಂಶದಪ್ರಮುಖ ಅರಸರೆಂದರೆ ಚಂದ್ರಗುಪ್ತಮೌರ್ಯ, ಬಿಂಬಸಾರ ಮತ್ತುದೇವನಾಂಪ್ರಿಯ(ಕ್ರಿ.ಪೂ. ೪೯೨-೪೬೧)ಎನ್ನಿಸಿದ್ದ ಅಶೋಕಚಕ್ರವರ್ತಿಗಳಾಗಿದ್ದಾರೆ. ಮೌರ್ಯಸಂತತಿಯವರು ಆಳಿದ್ದರಿಂದ ಮಗಧಸಾಮ್ರಾಜ್ಯಕ್ಕೆ ಮೌರ್ಯಸಾಮ್ರಾಜ್ಯವೆಂದೇ ಹೆಸರಾಯಿತು.
ಪ್ರಾಚೀನ ಭಾರತದ ಪ್ರಮುಖ ಅರಸುಮನೆತನವಾದ ಮೌರ್ಯರು ಭಾರತದಬಹುಭಾಗವನ್ನು ಆಳಿದರು. ಭಾರತದಲ್ಲಿಅರಸುಮನೆತನದ ಅಡಿಪಾಯ ಮತ್ತುವ್ಯವಸ್ಥಿತ ಆಡಳಿತ ಪದ್ಧತಿ ಇವರಿಂದಲೇಪ್ರಾರಂಭವಾಯಿತೆಂದು ಹೇಳಿದರೆವಸ್ತುನಿಷ್ಟವಾಗುತ್ತದೆ. ಇವರು ಉತ್ತರದಪಾಟಲೀಪುತ್ರವನ್ನು ರಾಜಧಾನಿಯಾಗಿಮಾಡಿಕೊಂಡು ಕ್ರಿ.ಪೂ. ನಾಲ್ಕನೆಯಶತಮಾನದ ಅಂತ್ಯದಲ್ಲಿ ಆಡಳಿತಕ್ಕೆಬಂದರು. ಚಂದ್ರಗುಪ್ತಮೌರ್ಯ ಇವರಮೊದಲ ಅರಸನಾಗಿದ್ದಾನೆ.
೧. ನವನಂದರು ಬ್ರಾಹ್ಮಣರನ್ನುರಾಜ್ಯಾಡಳಿತದಿಂದ ದೂರವಿಡಲುಪ್ರಯತ್ನಿಸುತ್ತಾರೆ. ಗೌಳಿ ಕುರುಬರ ಮತ್ತುಶೂದ್ರರ ಪ್ರಬಲ ಗಣತಂತ್ರದಲ್ಲಿಮಂತ್ರಿಯಾಗಿದ್ದ ರಾಕ್ಷಸನು ಇವರಮೆದುಳಾಗಿ ಕಾರ್ಯನಿರ್ವಹಿಸುತ್ತಾನೆ.ಇದನ್ನರಿತ ಕುಟಿಲ ಬ್ರಾಹ್ಮಣ ಚಾಣಕ್ಯನುಕುರುಬ ಕುಲದಲ್ಲಿಯ‘ಮುರಾ(ಮೋರ್>ನವಿಲು)ಯೆಂಬಹೆಸರಿನ ಸಂತತಿಯವನಾದಚಂದ್ರಗುಪ್ತನೊಂದಿಗೆ ಸೇರಿಕೊಂಡುಮುಳ್ಳನ್ನು ಮುಳ್ಳಿನಿಂದಲೇ ತೆಗೆದುನಂದರನ್ನು ಪಟ್ಟದಿಂದ ಕೆಳಗೆ ಇಳಿಸಿಚಂದ್ರಗುಪ್ತನನ್ನು ಪಟ್ಟಕ್ಕೆ ತರುತ್ತಾನೆ. ‘ಮೋರ್ ಎಂಬುದುಸಂಸ್ಕೃತೀಕರಣಗೊಂಡು ಮೌರ್ಯಎಂದಾಗಿದೆ. ಇಂದಿಗೂ ಕುರುಬರಲ್ಲಿಮೋರ್, ಮುರಾ, ಮೋರೆ ಎಂಬಕುಲ(ಬೆಡಗು)ಗಳಿವೆ.
೨. ‘ಭೌದ್ಧರ ದಾಖಲೆಗಳ ಪ್ರಕಾರ ಇಡೀಭರತಖಂಡವನ್ನು ಒಂದು ಛತ್ರದಡಿತಂದು ರಾಜ್ಯವಾಳಿದ ಚಂದ್ರಗುಪ್ತನುಒಬ್ಬ ಕುರುಬನಾಗಿದ್ದಾನೆ ಎಂದು ಡಬ್ಲು.ಎಂ. ಕ್ರೂಕ್ ಹೇಳುತ್ತಾನೆ.
`Chandra Gupta who brought the whole of India under one umbrella was a Shepherd of the princely race according to Buddist annals’(Tribes and castes of the N.W.P. by W.M. Crooke B.A., Vol 1, P. 50, 1896).
೩. `The Scythian Shepherds were also called Tacshaks (Tacsha = a serphant) because they carried on their flags a serphant. Chandragupta Mourya was a Tacshak. They reigned in Magadh for ten generations. Their kings were called Serpent Kings. ChandraGupta Maurya was a Tacshaks. The queen fled to Patliputra and there gave birth to a son who was called ChandraGupta by the Shepherd in whose fold he was born(Hindustan review, p. 519, December 1912).
೪. ಚಂದ್ರಗುಪ್ತ ಮೌರ್ಯನು ಒಬ್ಬಪ್ರಸಿದ್ಧ ಕುರುಬ ರಾಜನಾಗಿದ್ದಾನೆ.ಅವನಿಗೆ ‘ಮೌರ್ಯ ಎಂಬ ಹೆಸರುಬರಲು ಕಾರಣವಾದ ಅಂಶವನ್ನುಇತಿಹಾಸ ವಿದ್ವಾಂಸರು ನಿರ್ಧರಿಸಿ,ಒಮ್ಮತಾಭಿಪ್ರಾಯಕ್ಕೆ ಬಂದಿರುವುದಿಲ್ಲ.ಅವನ ತಾಯಿಯ ಹೆಸರು ‘ಮುರಾಎಂದಿದ್ದರಿಂದ ಬಂದಿರಬಹುದು. ಅವನಪೂರ್ವಜರು ಮೋರ್>ಮೌರಿ ಎಂಬಪರ್ವತಶ್ರೇಣಿ ಪ್ರದೇಶದ ಕುರುಬಬುಡಕಟ್ಟಿಗೆ ಸೇರಿದವರಾದ್ದರಿಂದಬಂದಿರಬಹುದು. ಅವನಿಗೆನವಿಲುಗಳೆಂದರೆ ಅಚ್ಚು ಮೆಚ್ಚಾದ್ದರಿಂದಬಂದಿರಬಹುದೆಂದೂ ಊಹೆಗಳನ್ನುಮಾಡಲಾಗುತ್ತದೆ. ಅದು ನಂತರ ಅವನವಂಶಜರ ಗೋತ್ರವಾಯಿತು. ‘ಮೋರೆಎಂಬ ಕುಲ ಕುರುಬರಲ್ಲಿದೆ.
``He was the one of the greatest kings of India. Archaeologists donot so far seem to have been able to find out the origin of the word `Maurya’. (A). Some say that the name of Chandragupta’s mother was `Mura’, hence name Maurya. (B). Some says that he was fond of seeing Peacocks , hence the name Maurya. (C). The word Maurya or Mauri is the name of the place whence he or his elders came, This name will became afterwards their `Gotras’, such as Hans,Mongolias, Hool, Hoon, maurya, Siria etc., These are the gotras of the Dhanagars and of the Rajputs’’( A Grammar of the Modern Geography by Arrowsmith. P. 330, 1844).
``In Morocco and otherbarbary states the ruling people were `Mauri’ afterwards corrupted into `Moors’. They were the most ancient race and were the ruling people of the whole country. They were Shepherds and lived a nomadic life. Moria is also the name of mountain in Syria’’( A Grammar of the Modern Geography by Arrow smith. P. 330, 1844).
೫. ಭಾರತ ಪ್ರಜಾಪ್ರಭುತ್ವದ ಪ್ರಾತಿನಿಧಿಕಸಂಸ್ಥೆಯಾಗಿ ರಾಜಧಾನಿನವದೆಹಲಿಯಲ್ಲಿ ‘ಸಂಸದ ಭವನನಿಂತಿದೆ. ಈ ಭವನದ ಮುಂದೆ ಅಂದರೆ೫ನೆಯ ಗೇಟ್‌ನಲ್ಲಿ ಒಂದುಸುಂದರವಾದ ಬಾಲಕನ ಶಿಲ್ಪ ಇದೆ.ಕೇವಲ ಚಡ್ಡಿ ಧರಿಸಿ ಒಂದು ಬಂಡೆಯಮೇಲೆ ಕೈಯಲ್ಲಿ ಚಿಕ್ಕ ಕೋಲೊಂದನ್ನುಹಿಡಿದು ಮಂಡಿಯೂರಿ ಕುಳಿತಿರುವ ಈಸುಂದರ ಬಾಲಕನ ಚಿತ್ರದ ಕೆಳಗೆ ಈರೀತಿ ಬರೆದಿದೆ.
‘`The shepherd boy, Chandragupta Mourya dreaming of the India, he wants to be create’
ಇದರ ಅರ್ಥವೆಂದರೆ,
‘ಭವ್ಯಭಾರತ ದೇಶದ ನಿರ್ಮಾಣದಕನಸನ್ನು ಕಾಣುತ್ತಿರುವ ಕುರುಬರಬಾಲಕ ಚಂದ್ರಗುಪ್ತ
ಎಂಬ ಒಕ್ಕಣಿಕೆ ಎದ್ದು ಕಾಣುತ್ತದೆ.ಇವನೇ ಭಾರತದ ಮೊದಲ ಮಹಾನ್ಸಾಮ್ರಾಜ್ಯವನ್ನು ಸ್ಥಾಪಿಸಿದ ಚಂದ್ರಗುಪ್ತಮೌರ್ಯ ಮತ್ತು ಇವನುಕುರುಬವಂಶದ ಕುಡಿ ಎಂಬುದುಹೆಮ್ಮೆಪಡುವ ವಿಚಾರವಾಗಿದೆ.
೬. ಅಶೋಕ ಚಕ್ರವರ್ತಿಯ ಕಾಲದಲ್ಲಿಭಾರತಕ್ಕೆ ಬಂದಿದ್ದ ಗ್ರೀಕ್ ದೇಶದರಾಯಭಾರಿ ತನ್ನ ರಾಜತಾಂತ್ರಿಕವರದಿಯಲ್ಲಿ ಚಂದ್ರಗುಪ್ತ ಮೌರ್ಯನುಮಹಾಭಾರತದ ಕೃಷ್ಣನ ೧೩೭ನೆಯವಂಶಜ(ತಲೆಮಾರು)ನೆಂದೂಉಲ್ಲೇಖಿಸಿದ್ದಾನೆ. ಚಂದ್ರಗುಪ್ತಮೌರ್ಯನ ಕುಲಕ್ಕೂ, ಮಹಾಭಾರತದಕೃಷ್ಣನ ಕುಲಕ್ಕೂ ಸಂಬಂಧವಿರುವುದನ್ನುಪ್ರಚಲಿತವಿರುವ ಕೃಷ್ಣನ ಭಾವಚಿತ್ರದಲ್ಲಿಕೃಷ್ಣನು ತನ್ನ ಕುಲಪ್ರತೀಕವಾದನವಿಲುಗರಿ ಇರುವುದನ್ನುಗಮನಿಸಬಹುದು. ಪ್ರಾಚೀನ ಕಾಲದಲ್ಲಿಪ್ರತಿಯೊಬ್ಬರೂ ತಮ್ಮ ಕುಲದಸಂಕೇತಗಳನ್ನು ಧರಿಸುತ್ತಿದ್ದರು.ಆದ್ದರಿಂದ ಕೃಷ್ಣನ ಭಾವಚಿತ್ರವು ನವಿಲುಗರಿ ಇಲ್ಲದಿದ್ದರೆ ಅದುಅಪೂರ್ಣವಾಗುತ್ತದೆ. ಅವನಬಾಲ್ಯದಿಂದ ಹಿಡಿದು ಅಂತ್ಯದವರೆಗೆನವಿಲುಗರಿಯು ಅವನ ಜೊತೆಗೆಇರುತ್ತದೆ.
೭. ನಂದರ ಆಳ್ವಿಕೆಯ ಸಮಯದಲ್ಲಿಬಳಕೆಯಲ್ಲಿದ್ದ ಭಾಷೆಗೆ ‘ನಂದಭಾಷೆಎಂದು ಕರೆಯಲಾಗುತ್ತಿತ್ತು. ಇದು ಕನ್ನಡಭಾಷೆಯನ್ನು ಹೋಲುವಭಾಷೆಯಾಗಿತ್ತು ಎಂದು ಮರಾಠಿಲೇಖಕರು ಬರೆಯುತ್ತಾರೆ.
‘ನಂದಗೌಳಿಗಳಾಗಿದ್ದ ಯದು-ತುರ್ವಶರುಕನ್ನಡಕ್ಕೆ ಹತ್ತಿರದ ಭಾಷಾ ಸಂಬಂಧವನ್ನುಹೊಂದಿದ್ದರೆಂದೂ, ದ್ವಾರಕೆಯವರೆಗೆಇರುವ ಹಟ್ಟಿಕಾರರಿಗೆ ಕುಂತಲರೆಂದುಕರೆಯಲಾಗುತ್ತಿತ್ತು ಮತ್ತು ನಂದರುಕರ್ನಾಟಕದ ಗೌಳಿ ಕುರುಬರು ಎಂದುಶಂ.ಬಾ. ಜೋಶಿಯವರುಅಭಿಪ್ರಾಯಪಟ್ಟಿದ್ದಾರೆ(ಶಂ.ಬಾ. ಕೃತಿಸಂಪುಟ ೧, ಪುಟ ೩೧೦).
೮. ಪ್ಲೂಟಾರ್ಕನ “ಲೈಫ್ಆಫ್ ಅಲೆಕ್ಸಾಂಡರ್ ಗ್ರೇಟ್ ಗ್ರಂಥದಲ್ಲಿಈ ರೀತಿ ದಾಖಲಿಸಿದೆ. ‘ಗ್ರೀಕ್ ದೊರೆಅಲೆಕ್ಸಾಂಡರನ ಮೊದಲ ದಾಳಿಯವೇಳೆಯಲ್ಲಿ‘ಅಂದ್ರಕೂಟಸ್(ಚಂದ್ರಗುಪ್ತ)ನು ಬಹಳಚಿಕ್ಕವನಿದ್ದನು ಮತ್ತು ಅವನು ಪುರುವಿನಸೈನ್ಯದಲ್ಲಿದ್ದ. ಪುರು(ಕುರುಬ ದೊರೆ)ವುಅಲೆಕ್ಸಾಂಡರನನ್ನು ಎದುರಿಸುವಾಗಚಂದ್ರಗುಪ್ತನು ಅಲೆಕ್ಗಾಂಡರನನ್ನುಕಂಡಿರಬೇಕು. ಇದು ಕ್ರಿ.ಶ. ೩೨೭ರಲ್ಲಿನಡೆದಿರಬೇಕು(ಸೂರ್ಯನಾರಾಯಣರಾವ್.ಬಿ., ಮರೆಯಲಾಗದ ಮಹಾಸಾಮ್ರಾಜ್ಯ (ಅನು: ಬಾಲಸುಭ್ರಹ್ಮಣ್ಯ),ಕನ್ನಡ ವಿ.ವಿ. ಹಂಪಿ, ೨೦೦೦, ಪುಟ೩೬).
೯. ವಿದ್ಯಾಪ್ರಕಾಶ ತ್ಯಾಗಿ ಎಂಬವಿದ್ವಾಂಸರು ತಮ್ಮ ಇತಿಹಾಸ ಕೃತಿ‘ಮಾರ್ಟಿಯಲ್ ರೇಸಸ್ ಆಫ್ಅನ್‌ಡಿವೈಡೆಡ್ ಇಂಡಿಯಾದಲ್ಲಿವಿಜಯನಗರ ಕಟ್ಟಿದ ಹಕ್ಕರಾಯ,ಬುಕ್ಕರಾಯರು ಧನಗಾರ(ಕುರುಬರು).ಧನಗಾರ(ಕುರುಬರು) ಹೊಯ್ಸಳ,ರಾಷ್ಟ್ರಕೂಟ, ಮೌರ್ಯ, ಪಲ್ಲವ,ಮರಾಠಾ ಮೊದಲಾದ ಸಾಮ್ರಾಜ್ಯಕಟ್ಟಿದ ವೀರ ಜನಾಂಗವಾಗಿದೆ. ಇದರಜೊತೆಗೆ ಕವಿಗಳು, ದಾರ್ಶನಿಕರೂ ಆದಕನಕದಾಸರು, ಕಾಳಿದಾಸರು ಇದೇಧನಗರ್ ಜನಾಂಗಕ್ಕೆ ಸೇರಿದವರುಎಂದು ಬರೆದು ದಾಖಲಿಸಿದ್ದಾರೆ. ಅದುಈ ರೀತಿ ಇದೆ.
Prominent Dhangars(Shepherds) have been Hakkaraya and Bukkaraya, founding father of Vijayanagara Empire. Dhanagars have established the Hoysalas, Rasthrakutas, Mouryas, Pallava, Holkar, Maratha dynasties etc. In addition the poets Kalidasa and Kanakadasa were also Dhanagars(Martial races of Undivided India, Vidyaprakasha Tyagi, P205).
ಚಂದ್ರಗುಪ್ತನು ಸಕಲ ಅಧಿಕಾರವನ್ನೂತನ್ನ ಹಿಡಿತದಲ್ಲಿಯೇ ಇಟ್ಟುಕೊಂಡಿದ್ದನಿರಂಕುಶ ಪ್ರಭುವಾಗಿದ್ದನು. ಪ್ರಜೆಗಳಹಿತವೇ ತನ್ನ ಹಿತವೆಂದು ನಂಬುವಆದರ್ಶಪ್ರಾಯ ಚಕ್ರವರ್ತಿಯಾಗಿದ್ದನು.ಉತ್ಖನನಗಳು ಮೌರ್ಯರ ಕಾಲದಹಲವಾರು ಊರುಗಳನ್ನು ಪತ್ತೆಮಾಡಿವೆ. ಅವುಗಳಲ್ಲಿ ಪಾಟಲಿಪುತ್ರ,ಕೌಶಾಂಬಿ, ಉಜ್ಜಯನಿ ಮತ್ತುತಕ್ಷಶಿಲೆಗಳು ಮುಖ್ಯ ನಗರಗಳಾಗಿವೆ.
10. ನಿಜ! ಚಂದ್ರಗುಪ್ತನ ಕುಲಯಾವುದು ಎಂಬುದರ ಕುರಿತುವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ.ಇದಕ್ಕಾಗಿ ಹಲವು ವಿದ್ವಾಂಸರು ತಮ್ಮವೇಆದ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ.ಯಾರು ಯಾವುದೇ ಅಭಿಪ್ರಾಯಗಳನ್ನುಪ್ರಚುರಪಡಿಸಲಿ, ಅಧ್ಯಯನವು ಅಂದಿನಕಾಲದ ಸಾಮಾಜಿಕ ರಚನೆಗಳ ಕುರಿತುಚಿಂತಿಸುತ್ತದೆ.
ಚಂದ್ರಗುಪ್ತನ ಕಾಲವನ್ನುವಿದ್ವಾಂಸರು ಕಿ.ಪೂ. ೩ನೆಯಶತಮಾನವೆಂದು ಗುರುತಿಸಿದ್ದಾರೆ. ಈಕಾಲಘಟ್ಟದಲ್ಲಿ ಅಂದಿನ ಸಾಮಾಜಿಕಸ್ಥಿತಿಗಳನ್ನು ಅವಲೋಕಿಸಿದರೆ ನಮಗೆಪೂರ್ವಗ್ರಹಪೀಡಿತ ಬರಹಗಳಸ್ವಾರ್ಥದ ಹುನ್ನಾರ ಅರ್ಥವಾಗುತ್ತದೆ.ಚಂದ್ರಗುಪ್ತನ ಪೂರ್ವಜರು ‘ಮೋರ್ಪರ್ವತಶ್ರೇಣಿಯಿಂದ ಬಂದ ಬುಡಕಟ್ಟುಜನಾಂಗದವರಾದ್ದರಿಂದ ಅವರ ವಂಶಕ್ಕೆಮೌರ್ಯರು ಎಂಬ ಹೆಸರುಬಂದಿರುವುದಾಗಿ ಕೆಲವುಇತಿಹಾಸಕಾರರು ಹೇಳುತ್ತಾರೆ. ಇನ್ನೂಕೆಲವು ಇತಿಹಾಸಕಾರರು ಇವರದು‘ನವಿಲುಗಳನ್ನ ಸಾಕುವಪಶುಪಾಲಕ(ಕುರುಬ)ರವಂಶವಾಗಿದೆಯೆಂದೂ ವಾದಿಸುತ್ತಾರೆ.ಮತ್ತೇ ಕೆಲವರು ಚಂದ್ರಗುಪ್ತನತಾಯಿಯ ಹೆಸರು ‘ಮುರಾದೇವಿಎಂದಿದ್ದು, ಈ ವಂಶಕ್ಕೆ ಈ ಹೆಸರುಬಂದಿರುವುದಾಗಿ ಹೇಳಲಾಗುತ್ತದೆ.ಇವೆಲ್ಲ ಸಿದ್ಧಾಂತಗಳು ಬರಿ ಊಹೆಗಳೂಆಗಿರಬಹುದು.
ಕ್ರಿ.ಪೂರ್ವ ೪-೩ನೆಯಶತಮಾನದಲ್ಲಿ ವರ್ಣ ವ್ಯವಸ್ಥೆಯುಬಲಹೀನವಾಗಿದ್ದು, ಅದಕ್ಕೆಪೂರ್ವದಲ್ಲಿದ್ದ ಕಟ್ಟುಪಾಡುಗಳುಸಡಿಲವಾಗುತ್ತ ಬಂದಿದ್ದವೆಂದು ಡಾ.ಡಿ.ಡಿ. ಕೋಸಾಂಬಿಯವರುವಾದಿಸುತ್ತಾರೆ. ವರ್ಣ ವ್ಯವಸ್ಥೆಯಪ್ರಮುಖ ವರ್ಣಗಳಾದ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಶೂದ್ರೆಂಬ ನಾಲ್ಕುವರ್ಗಗಳು ಅಂದಿನ ಬುಡಕಟ್ಟುಸಮುದಾಯದೊಂದಿಗೆ ವೈವಾಹಿಕಸಂಬಂಧವನ್ನು ಏರ್ಪಡಿಸಿಕೊಂಡುವರ್ಣ ಸಂಕರವನ್ನುಹುಟ್ಟುಹಾಕತೊಡಗಿದ್ದವು. ಇದರಜೊತೆಜೊತೆಗೆ ಅಂದಿನ ಪ್ರಮುಖವೃತ್ತಿಗಳಾದ ಪಶುಪಾಲನೆ, ಕೃಷಿಮುಂತಾದವುಗಳು ವೃತ್ತಿ ಮೂಲದಿಂದಜಾತಿಗಳು ಬೀಜಾಂಕುವಾಗುತ್ತಿದ್ದುದನ್ನುಜನಾಂಗೀಯ ತಜ್ಞರು ದಾಖಲಿಸಿದ್ದಾರೆ.ಅಂದಿನ ಭಾರತೀಯ ಸಮಾಜ ವರ್ಣವ್ಯವಸ್ಥೆಯನ್ನು ಕಳಚಿಕೊಂಡು ವೃತ್ತಿಆಧಾರಿತ ಜಾತಿ ವ್ಯವಸ್ಥೆಗೆಜಾರಿಹೋಗುತ್ತಿದ್ದುದು ಸತ್ಯಸಂಗತಿಯಾಗಿದೆ. ಅಂದಿನ ಜಾತಿವ್ಯವಸ್ಥೆಯನ್ನು ಮೌರ್ಯ ಜಾತಿವ್ಯವಸ್ಥೆಯೆಂದು ಸೂಚಿಸಿರುವವಿದ್ವಾಂಸರು ಈ ಕೆಳಗಿನಂತೆಅಭಿಪ್ರಾಯಪಡುತ್ತಾರೆ.
`Cast system prevailed among Mourya Community. The greek writers like Megasthenese and Diodorus also told us about Mourya Caste system.
Indian community had the traditional fourfold heredities caste system, but the Greeks told about Seven castes which has made the scholars wonder. It is possible that the Greeks were not aware of fourfold classification or `Chturvarna’ caste system.
According to some scholars, the population of Indiaduring the Mourya Period was dvided into several castes, namely
1. The Philosophers(ತತ್ವಜ್ಞಾನಿ) 2.The Husbandries (ಬೇಸಾಯಗಾರ)
3. The solders (ಯೋಧ) 4. The Overseers (ಮೇಲ್ವಿಚಾರಕ)
5. The councilors(ಮಂತ್ರಿಗಳು) 6. The Assessors (ತೆರಿಗೆ ವಶೂಲಿಗಾರರು)
7. The Shepherds(ಕುರುಬರು) 8. The Neat Herds (ದನಗಾರ ಕುರುಬರು)
9. The Artisan (ಕಲಾವಿದರು)
ಇಲ್ಲಿ ಗಮನಿಸಬೇಕಾದ ಅಂಶವೆಂದರೆಇವು ವೃತ್ತಿಮೂಲದ ಮೂಲಕ ಜಾತಿವಿಭಜನೆಯ ಹಂತದಲ್ಲಿದ್ದು ಇದರಲ್ಲಿಕುರುಬ ಮತ್ತು ದನಗಾರ ಪಶುಪಾಲಕಸಮುದಾಯವು ಅತ್ಯಧಿಕಸಂಖ್ಯೆಯಲ್ಲಿದ್ದುದಾಗಿದೆ. ಆಗಿನಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿಇಂದಿನ ಬಹುತೇಕ ಜಾತಿಗಳುಜನ್ಮತಳೆದಿರಲಿಲ್ಲ ಎನ್ನಬಹುದು. ಹೌದು!ಅಂದು ಹುಟ್ಟಿರದಿದ್ದ ಜಾತಿಗಳಲ್ಲಿ‘ಗಾಣಿಗ ಜಾತಿಯೂ ಒಂದು.
ಡಾ. ಲಿಂಗದಹಳ್ಳಿ ಹಾಲಪ್ಪ
ಹಾಲುಮತ ಇತಿಹಾಸ, ಸಮಾಜ ಮತ್ತು ಸಂಸ್ಕೃತಿ ಚಿಂತಕರು
ಶಿವಮೊಗ್ಗ
ಆಧಾರ :
ಕುರುಬರ ಇತಿಹಾಸ : ಭಾಗ ೧
ಲೇಖಕರು : ಡಾ. ಲಿಂಗದಹಳ್ಳಿ ಹಾಲಪ್ಪ
ಪ್ರಕಟಣೆ : ಕುರುಬರ ಸಾಂಸ್ಕೃತಿಕ ಪರಿಷತ್ತು ಬೆಂಗಳೂರು
ಕಾಂಟ್ಯಾಕ್ಟ : ಕಾ.ತ.ಚಿಕ್ಕಣ್ಣ ೯೪೪೮೦೯೧೧೯೧